ಆಸ್ತಿ ವಿವಾದ: ನ್ಯಾಯಕ್ಕೆ ಆಗ್ರಹಿಸಿ ನಡೆಸುತ್ತಿದ್ದ ಬೇಗ್ ಕುಟುಂಬದ ಧರಣಿ ಅಂತ್ಯ

Update: 2016-05-26 09:12 GMT

ಮುಂಡಗೋಡ, ಮೇ 26: ಪಟ್ಟಣದ ಅಂಬೇಡ್ಕರ ಓಣಿ ನಿವಾಸಿ ಹುಸೈನ್ ಬೇಗ್(ಅಲ್ತಾಫ) ಸವಣೂರ ಹಾಗೂ ಕುಟುಂಬಸ್ಥರು ಒಂದು ವಾರದಿಂದ ಇಲ್ಲಿನ ಪಟ್ಟಣ ಪಂಚಾಯತ್ ಕಾರ್ಯಾಲಯದ ಎದುರು ನಡೆಸುತ್ತಿದ್ದ ಧರಣಿಯನ್ನು ಪಪಂ ಮುಖ್ಯಾಧಿಕಾರಿ ಹಾಗೂ ಆರಕ್ಷಕ ನಿರೀಕ್ಷಕ ಭರವಸೆಯ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಕೈಬಿಟ್ಟಿದ್ದಾರೆ.

ಆಸ್ತಿ ವಿವಾದಕ್ಕೆ ಸಂಬಂದಿಸಿದಂತೆ ಕೋರ್ಟ್‌ನಲ್ಲಿ ದಾವೆ ಚಾಲ್ತಿಯಲ್ಲಿರುವಾಗಲೇ ವ್ಯಕ್ತಿಯೊಬ್ಬರು ಅನಧಿಕೃತವಾಗಿ ಮನೆ ನಿರ್ಮಿಸುತ್ತಿದ್ದಾನೆ. ಹಣ ಬಲದಿಂದ ದರ್ಪ ತೋರುತ್ತಿದ್ದರೆ ಅನ್ಯಾಯ ತಡಯಬೇಕಾದ ಅಧಿಕಾರಿಗಳು ನಿಷ್ಕ್ರಿಯರಾಗಿದ್ದಾರೆ ತಮಗೆ ನ್ಯಾಯ ಸಿಗಬೇಕೆಂದು ಅಗ್ರಹಿಸಿ ಕುಟುಂಬ ಸದಸ್ಯರೊಂದಿಗೆ ಧರಣಿ ಕುಳಿತಿದ್ದರು. ಬುಧವಾರ ಸ್ಥಳಕ್ಕಾಗಮಿಸಿದ ಪ.ಪಂ. ಮುಖ್ಯಾಧಿಕಾರಿ ಸಂಗನಬಸಯ್ಯ ಮನವಿಯನ್ನು ಜಿಲ್ಲಾಧಿಕಾರಿ ಗಮನಕ್ಕೆ ತರಲಾಗಿದೆ. ಆಸ್ತಿ ವ್ಯಾಜ್ಯ ನ್ಯಾಯಾಲಯದಲ್ಲಿರುವ ಕಾರಣ ಇತ್ಯರ್ಥ ಆಗುವ ತನಕ ಧರಣಿ ನಡೆಸಬಾರದು ಎಂದು ಮನವೊಲಿಸಿದರು
ಪ.ಪಂ. ಆಧ್ಯಕ್ಷ ರಫೀಕ್ ಇನಾಮ್ದಾರ, ಉಪಾಧ್ಯಕ್ಷ ಫಕ್ಕಿರಪ್ಪಅಂಟಾಳ, ರಾಬರ್ಟ ಲೋಬೊ, ಸಂಜು ಪೀಶೆ, ಲತೀಫ ಇನಾಮ್ದಾರ, ಲಿಂಗರಾಜ ಕನ್ನೂರ, ದಲಿತ ಸಂಘಟನೆಯ ಪ್ರಮುಖರಾದ ಚಿದಾನಂದ ಹರಿಜನ, ಹನಮಂತಪ್ಪಭಜಂತ್ರಿ, ಹನಮಂತಪ್ಪಆರೇಗೊಪ್ಪಮುಂತಾದವರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News