×
Ad

ಅಂತಾರಾಷ್ಟ್ರೀಯ ಕರಾಟೆ ಚಾಂಪಿಯನ್‌ಶಿಪ್: ರೆಡ್‌ಕ್ಯಾಮಲ್ ಶಾಲಾ ವಿದ್ಯಾರ್ಥಿಗಳಿಗೆ ಪ್ರಶಸ್ತಿ

Update: 2016-05-26 19:07 IST

ಮಂಗಳೂರು,ಮೇ 26: ಶ್ರೀಲಂಕಾದ ಕ್ಯಾಂಡಿಯಲ್ಲಿ ಮೇ 8 ರಂದು ನಡೆದ ಅಂತಾರಾಷ್ಟ್ರೀಯ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಮಂಗಳೂರಿನ ರೆಡ್‌ಕ್ಯಾಮಲ್ ಸ್ಕೂಲ್‌ನ ವಿದ್ಯಾರ್ಥಿಗಳು ಬೇರೆ ಬೇರೆ ವಿಭಾಗದಲ್ಲಿ ಹಲವು ಪ್ರಶಸ್ತಿಗಳನ್ನು ಪಡೆದು ತಂಡ ಪ್ರಶಸ್ತಿಯನ್ನು ಪಡೆದಿದ್ದಾರೆ.

 ಹುಡುಗರ ಕುಮಿಟೆ ಹಾಗೂ ಕಟಾ ವಿಭಾಗದಲ್ಲಿ ಮುಹಮ್ಮದ್ ರಿಷದ್ 1 ಚಿನ್ನ ಮತ್ತು 1 ಬೆಳ್ಳಿ, ತೌಹೀದ್ 1 ಚಿನ್ನ, 1 ಬೆಳ್ಳಿ, ಅನಸ್ 2 ಬೆಳ್ಳಿ, ಓವೆಸ್ 2 ಬೆಳ್ಳಿ ಪದಕವನ್ನು ಪಡೆದಿದ್ದಾರೆ.

ಹುಡುಗಿಯರ ಕುಮಿಟೆ ಹಾಗೂ ಕಟಾ ವಿಭಾಗದಲ್ಲಿ ಆಯಿಷಾ ಫಾತಿಮಾ 2 ಚಿನ್ನ , ನಬೀಲಾ ಸುಹಾ 2 ಚಿನ್ನ , ರಷೀದಾ 1 ಚಿನ್ನ, 1 ಬೆಳ್ಳಿ, ಝೈನಭಾ 1 ಚಿನ್ನ 1 ಬೆಳ್ಳಿ, ನಿಝಾ ಫಾತೀಮಾ 1 ಚಿನ್ನ 1 ಬೆಳ್ಳಿ , ಜೈಷಾ ಫಾತಿಮಾ 1 ಚಿನ್ನ 1 ಬೆಳ್ಳಿ ಪದಕವನ್ನು ಪಡೆದಿದ್ದು, ಮುಂದೆ ಮಲೇಷ್ಯಾದಲ್ಲಿ ನಡೆಯುವ ಕರಾಟೆ ಚಾಂಪಿಯನ್‌ಶಿಪ್ ಗೆ ಆಯ್ಕೆಯಾಗಿದ್ದಾರೆ.

ಇವರು ಶೋರಿನ್ ರಿಯೂ ಕರಾಟೆ ಅಸೋಸಿಯೇಶನ್ ಮುಖ್ಯ ಶಿಕ್ಷಕ ನದೀಮ್, ಝಕೀಯ ಯಾಸೀನ್ ಹಾಗೂ ಜಝೀಲಾ ಮರಿಯಮ್ಮ ಇವರಿಂದ ತರಬೇತಿಯನ್ನು ಪಡೆಯುತ್ತಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News