×
Ad

ಸಜಿಪನಡು: ಕೇಂದ್ರ ಜಮಾಅತ್ ಪದಾಧಿಕಾರಿಗಳ ಆಯ್ಕೆ

Update: 2016-05-26 19:32 IST

ಬಂಟ್ವಾಳ, ಮೇ 26: ಸಜಿಪನಡು ಗ್ರಾಮದ ಏಳು ಮದರಸ, ನಾಲ್ಕು ಮಸೀದಿ ಮತ್ತು ಮೂರು ಜುಮಾ ಮಸೀದಿಗಳ ಒಕ್ಕೂಟದ ಕೇಂದ್ರ ಜಮಾಅತ್ ಆಡಳಿತ ಸಮಿತಿಯ ವಾರ್ಷಿಕ ಮಹಾ ಸಭೆಯು ಇತ್ತೀಚೆಗೆ ಕೇಂದ್ರ ಮದರಸ ಕಟ್ಟದಲ್ಲಿ ಹಾಜಿ ಎಸ್.ಬಿ.ಶೇಖ್ ಅಬ್ದುಲ್ಲ ಮುಸ್ಲಿಯಾರ್ ಅಧ್ಯಕ್ಷತೆಯಲ್ಲಿ ಜರಗಿತು.

ಸಬೆಯಲ್ಲಿ 2016-17ನೆ ಸಾಲಿನ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಹಾಜಿ ಎಸ್.ಅಬ್ದುರ್ರಝಾಕ್, ಕಾರ್ಯದರ್ಶಿಯಾಗಿ ಎಸ್.ಕೆ.ಮುಹಮ್ಮದ್ ಸತತ ಮೂರನೆ ಬಾರಿಗೆ ಆಯ್ಕೆಯಾದರು.

ಉಪಾಧ್ಯಕ್ಷರಾಗಿ ಹಾಜಿ ಎಸ್.ಅಬ್ದುಲ್ ಕರೀಂ ಮತ್ತು ಅಬ್ದುಲ್ ಖಾದರ್, ಜೊತೆ ಕಾರ್ಯದರ್ಶಿಯಾಗಿ ಎಸ್.ಮುಹಮ್ಮದ್ ನಾಸಿರ್, ಬೊಳಮೆ ಮೋನು, ಕೋಶಾಧಿಕಾರಿಯಾಗಿ ಪಿ.ವಿ.ಎಸ್.ಹಮೀದ್, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಹಾಜಿ ಎಸ್.ಅಬ್ಬಾಸ್, ಹಾಜಿ ಎಸ್.ಅಬ್ದುಲ್ ಸತ್ತಾರ್, ಹಾಜಿ ಅಬ್ದುಲ್ ಅಝೀಝ್, ಹಾಜಿ ಎ.ಎಂ.ಇಸ್ಮಾಯೀಲ್, ಎನ್.ಎನ್.ಅಬ್ದುರ್ರಹ್ಮಾನ್, ಆಸಿಫ್ ಕುನ್ನಿಲ್, ಎಸ್.ಅಬ್ದುರ್ರಝಾಕ್, ಹಮೀದ್ ಉಂಞಕ, ಎನ್.ಎಸ್.ಬಾವು, ಯೂಸುಫ್ ರಿಕ್ಷಾ, ಹಾಜಿ ಎಸ್.ಎನ್.ಮೂಸಬ್ಬ, ಯೂಸುಫ್ ಇದ್ದಿನಬ್ಬ, ಹಾಮದ್ ಬಾವು, ಜಸೀಂ, ಎಸ್.ಕೆ. ಸಿರಾಜ್, ಎಸ್.ಎಂ.ಲತೀಫ್, ಎಸ್.ಎಂ.ಅಬ್ಬಾಸ್, ಎಸ್.ಎಲ್.ಅಬ್ದುಲ್ ಖಾದರ್, ಹಸೈನಾರ್ ಪದವು, ಹನೀಫ್ ಹಮೀದಾಕ, ಎಸ್.ಕೆ.ಹಮೀದ್, ರಝಾಕ್ ಪದವು, ಎಸ್.ಬಿ.ಎನ್.ರಫೀಕ್, ಉಂಞ ಬಸ್ತಿಗುಡ್ಡೆ, ಹಮೀದ್ ಮಡೆಲಚ್ಚಿಲ್ ಇವರನ್ನು ಮೂರನೆ ಬಾರಿಗೆ ಆಯ್ಕೆ ಮಾಡಲಾಯಿತು.

ಎಸ್.ಮುಹಮ್ಮದ್ ನಾಸಿರ್ ವಂದಿಸಿದರು. ಕೇಂದ್ರ ಜಮಾಅತ್ ಖತೀಬ ಅಶ್ಫಾಕ್ ಪೈಝಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News