ಅಕ್ರಮ ಮರಳು ಸಾಗಾಟ: ಮೂವರ ಬಂಧನ; ಲಾರಿ ವಶ
Update: 2016-05-26 19:41 IST
ಕೊಣಾಜೆ, ಮೇ 26: ಅಕ್ರಮವಾಗಿ ಹೊರರಾಜ್ಯಕ್ಕೆ ಮರಳು ಸಾಗಾಟ ಮಾಡುತ್ತಿದ್ದ ಮೂರು ಲಾರಿಗಳನ್ನು ಪೊಲೀಸರು ವಶಪಡಿಸಿಕೊಂಡ ಘಟನೆ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ನೆತ್ತಿಲಪದವು ಹಾಗೂ ತೌಡುಗೋಳಿ ಕ್ರಾಸ್ ಬಳಿ ನಡೆದಿದೆ.
ಕಲ್ಲಾಪು ಪ್ರದೇಶದಿಂದ ಕೇರಳಕ್ಕೆ ಅಕ್ರಮವಾಗಿ ಲಾರಿಗಳ ಮೂಲಕ ಮರಳು ಸಾಗಾಟ ಮಾಡುತ್ತಿದ್ದಾಗ ಇನ್‌ಸ್ಪೆಕ್ಟರ್ ಅಶೋಕ್ ನೇತೃತ್ವದ ಪೊಲೀಸರ ತಂಡ ಲಾರಿಗಳನ್ನು ವಶಪಡಿಕೊಂಡು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಅಸೈ ಮದಕ ನಿವಾಸಿ ಮುಹಮ್ಮದ್ ಅಶ್ರಫ್(23), ಬೆಳ್ಮ ದೇರಳಕಟ್ಟೆಯ ಮುಹಮ್ಮದ್ ಮುಖ್ತಾರ್(24) ಹಾಗೂ ತಲಪಾಡಿ ಕೆ.ಸಿ.ರೋಡ್‌ನ ಇಬ್ರಾಹೀಂ(56) ಎಂದು ಗುರುತಿಸಲಾಗಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಈ ಬಗ್ಗೆ ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.