×
Ad

ಪಿಯುಸಿ: ದ.ಕ. ಜಿಲ್ಲೆಯ 5 ಕಾಲೇಜುಗಳಿಗೆ ಶೇ. 100 ಫಲಿತಾಂಶ

Update: 2016-05-26 20:37 IST

ಮಂಗಳೂರು, ಮೇ 26: ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಬುಧವಾರ ಪ್ರಕಟಗೊಂಡಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಐದು ಪದವಿ ಪೂರ್ವ ಕಾಲೇಜುಗಳು ಶೇ. 100 ಫಲಿತಾಂಶ ಪಡೆದಿವೆ.

ಸೈಂಟ್ ಜಾರ್ಜ್ ಪದವಿಪೂರ್ವ ಕಾಲೇಜು ನೆಲ್ಯಾಡಿ, ರಾಮಾಶ್ರಮ ಪದವಿಪೂರ್ವ ಕಾಲೇಜು ಯೆಯ್ಯಾಡಿ, ಇಸ್ಲಾಮಿಕ್ ಮಹಿಳಾ ಪದವಿಪೂರ್ವ ಕಾಲೇಜು ಉಳ್ಳಾಲ, ನವಚೇತನ ಪದವಿಪೂರ್ವ ಕಾಲೇಜು ನೀರುಮಾರ್ಗ ಹಾಗೂ ದುರ್ಗಾಂಬ ಪದವಿಪೂರ್ವ ಕಾಲೇಜು ಅಲಂಕಾರು ಶೇ.100 ಫಲಿತಾಂಶ ಪಡೆದ ಕಾಲೇಜುಗಳಾಗಿವೆ.

ಕನಿಷ್ಠ ಫಲಿತಾಂಶ ಶೇ.38

ಜಿಲ್ಲೆಯ ಬಿ.ಸಿ.ರೋಡ್‌ನ ಆದರ್ಶ ಪದವಿಪೂರ್ವ ಕಾಲೇಜು ಜಿಲ್ಲೆಯಲ್ಲೇ ಕನಿಷ್ಠ ಶೇ.38 ಫಲಿತಾಂಶ ಪಡೆದಿದೆ. ಉಳಿದಂತೆ ಸರಕಾರಿ ಪದವಿಪೂರ್ವ ಕಾಲೇಜು ಪಿಲಾತಬೆಟ್ಟು ಶೇ. 54, ಸರಕಾರಿ ಪದವಿಪೂರ್ವ ಕಾಲೇಜು ಸಜಿಪಮೂಡ ಶೇ.55.2, ಕಿಟಲ್ ಪದವಿಪೂರ್ವ ಕಾಲೇಜು ಗೋರಿಗುಡ್ಡ ಶೇ.57, ಟಿಪ್ಪು ಸುಲ್ತಾನ್ ಪದವಿಪೂರ್ವ ಕಾಲೇಜು ಶೇ.60, ರಾಮಕೃಷ್ಣ ಪದವಿಪೂರ್ವ ಕಾಲೇಜು ಮಂಗಳೂರು ಶೇ.65.3, ಬದ್ರಿಯಾ ಪದವಿಪೂರ್ವ ಕಾಲೇಜು ಕಂದುಕ ಶೇ.66.66 ಕನಿಷ್ಠ ಫಲಿತಾಂಶ ದಾಖಲಿಸಿರುವ ಕಾಲೇಜುಗಳು.

ತಾಲೂಕುವಾರು ಫಲಿತಾಂಶ

ಮಂಗಳೂರು ತಾಲೂಕಿನಲ್ಲಿ ಶೇ.90ಕ್ಕಿಂತ ಅಧಿಕ ಫಲಿತಾಂಶ ಪಡೆದ ಕಾಲೇಜುಗಳು: ಎಕ್ಸ್‌ಪರ್ಟ್ ಪದವಿಪೂರ್ವ ಕಾಲೇಜು ಶೇ.99.62, ಆಳ್ವಾಸ್ ಪದವಿಪೂರ್ವ ಕಾಲೇಜು ಮೂಡುಬಿದಿರೆ ಶೇ.99.29, ಸುಂದರಿ ಆನಂದ ಆಳ್ವ ಮೆಮೋರಯಲ್ ಪಪೂ ಕಾಲೇಜು ಮಿಜಾರು ಶೇ.98.92, ನಾರಾಯಣಗುರು ಪದವಿಪೂರ್ವ ಕಾಲೇಜು ಕಾಟಿಪಳ್ಳ ಶೇ. 98.7, ಸರಕಾರಿ ಪ.ಪೂ. ಕಾಲೇಜು ತೆಂಕಮಿಜಾರು ಶೇ. 98.41, ಎಕ್ಸ್‌ಪರ್ಟ್ ಪಪೂ ಕಾಲೇಜು ವಳಚ್ಚಿಲ್ ಶೇ.97.77, ಶಾರದಾ ಪದವಿಪೂರ್ವ ಕಾಲೇಜು ಕೊಡಿಯಾಲ್‌ಬೈಲ್ ಶೇ.97.72, ಸುಂದರಿ ಆನಂದ ಆಳ್ವಾಸ್ ಪಪೂ ಕಾಲೇಜು ವಿದ್ಯಾಗಿರಿ 97.5, ನಿಶಾರ ಪ.ಪೂ. ಕಾಲೇಜು ಪಾವೂರು ಶೇ.97.4, ವಾಣಿ ಇಂಡಿಪೆಂಡೆಂಟ್ ಪ.ಪೂ. ಕಾಲೇಜು 97.31, ಹೋಲಿ ರೋಸರಿ ಪ.ಪೂ. ಕಾಲೇಜು ಮೂಡುಬಿದಿರೆ ಶೇ. 97.3, ಮದನಿ ಪದವಿಪೂರ್ವ ಕಾಲೇಜು ಉಳ್ಳಾಲ ಶೇ. 97, ವಿಕಾಸ ಪಪೂ ಕಾಲೇಜು ಮೇರಿಹಿಲ್ ಶೇ.96.39, ಅಸ್ರಾರುದ್ದೀನ್ ಪ.ಪೂ.ಕಾಲೇಜು ಗುರುಕಂಬಳ ಶೇ.96.29, ಎಕ್ಸಲೆಂಟ್ ಪಪೂ ಕಾಲೇಜು ಮೂಡಬಿದ್ರೆ ಶೇ.96.2, ವಿಕ್ಟೋರಿಯಾ ಪಪೂ ಕಾಲೇಜು ಲೇಡಿಹಿಲ್ ಶೇ. 96, ಆಗ್ನೆಸ್ ಪದವಿಪೂರ್ವ ಕಾಲೇಜು ಮಂಗಳೂರು ಶೇ. 95.43, ಸಂತ ರೇಮಂಡ್ಸ್ ಪಪೂ ಕಾಲೇಜು ವಾಮಂಜೂರು ಶೇ.95, ಜೈನ್ ಪದವಿಪೂರ್ವ ಕಾಲೇಜು ಮೂಡುಬಿದಿರೆ ಶೇ.94.64, ನಿರಂಜನ ಸ್ವಾಮಿ ಪಪೂ ಕಾಲೇಜು ಸುಂಕದಕಟ್ಟೆ ಶೇ.94.25, ಗೋವಿಂದ ದಾಸ್ ಪಪೂ ಕಾಲೇಜು ಸುರತ್ಕಲ್ ಶೇ.94, ಜೈನ್ ಕಾಳಿ ಪಪೂ ಕಾಲೇಜು ಮೂಡುಬಿದಿರೆ ಶೇ.93.88, ಸರಕಾರಿ ಪ.ಪೂ. ಕಾಲೇಜು ಚೇಳ್ಯಾರು ಶೇ.93.75, ಸಂತ ಜೊಸೆಫ್ ಪದವಿಪೂರ್ವ ಕಾಲೇಜು ಬಜ್ಪೆ ಶೇ.92.3, ಕನಚೂರು ಪ.ಪೂ. ಕಾಲೇಜು ದೇರಳಕಟ್ಟೆ 91.83, ಮಧುಸೂದನ ಕುಶೆ ಪ.ಪೂ. ಕಾಲೇಜು ಶೇ.91.8, ಕೆನರಾ ಪದವಿಪೂರ್ವ ಕಾಲೇಜು ಮಂಗಳೂರು ಶೇ.91.63, ಸರಕಾರಿ ಪದವಿಪೂರ್ವ ಕಾಲೇಜು ರಥಬೀದಿ ಶೇ. 91.11, ಮೆಲ್ಕಾಲ್ ಮಹಿಳಾ ಪಪೂ ಕಾಲೇಜು ಮೆಲ್ಕಾರ್ ಶೇ.91, ಕಪಿತಾನಿಯೊ ಪ.ಪೂ. ಕಾಲೇಜು ನಾಗೊರಿ ಶೇ.90.75, ಸರಕಾರಿ ಪದವಿಪೂರ್ವ ಕಾಲೇಜು ವಾಮದಪದವು ಶೇ.90 ಫಲಿತಾಂಶವನ್ನು ಪಡೆದುಕೊಂಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News