×
Ad

ಪುತ್ತೂರು: ಜೀನಸು ಅಂಗಡಿಗೆ ಬೆಂಕಿ; ಅಪಾರ ನಷ್ಟ

Update: 2016-05-26 20:43 IST

ಪುತ್ತೂರು, ಮೇ 26: ಜೀನಸು ಅಂಗಡಿಯೊಂದಕ್ಕೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಅಕಸ್ಮಾತ್ ಬೆಂಕಿ ತಗುಲಿಕೊಂಡು ಸುಟ್ಟು ಹೋದ ಘಟನೆ ಬುಧವಾರ ನಡುರಾತ್ರಿ ಸಂಭವಿಸಿದೆ.

ಪುತ್ತೂರು ನಗರದ ಹೊರವಲಯದ ಬಪ್ಪಳಿಗೆ ನಿವಾಸಿ ಅಬೂಬಕರ್ ಎಂಬವರಿಗೆ ಸೇರಿದ ಬಪ್ಪಳಿಗೆಯಲ್ಲಿನ ಜೀನಸು ಅಂಗಡಿ ಬೆಂಕಿ ಅನಾಹುತಕ್ಕೆ ಒಳಗಾಗಿದೆ.

ಅಬೂಬಕ್ಕರ್ ರಾತ್ರಿ ವೇಳೆ ತನ್ನ ಅಂಗಡಿಯನ್ನು ಬಂದ್ ಮಾಡಿ ಮನೆಗೆ ತೆರಳಿದ್ದು, ಆ ಬಳಿಕ ಅವಘಡ ಸಂಭವಿಸಿದೆ. ಅಂಗಡಿಯಲ್ಲಿದ್ದ ಸಾಮಗ್ರಿಗಳು ಸುಟ್ಟು ಹೋಗಿದ್ದು ಸುಮಾರು 7.5 ಲಕ್ಷ ರೂ. ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಅಂಗಡಿಯೊಳಗಿದ್ದ ಕಪಾಟು, ಮೇಜು, ರೆಫ್ರಿಜರೇಟರ್, ಜೀನಸು ಸಾಮಾನುಗಳು, ತರಕಾರಿ, ತಂಪು ಪಾನೀಯಗಳು ಬೆಂಕಿಗೆ ಆಹುತಿಯಾಗಿವೆ.

ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News