ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ದಿನಕರ್‌ಗೆ ಬೇಕಿದೆ ಸಹೃದಯರ ನೆರವು
ಮೂಡುಬಿದಿರೆ, ಮೇ 26: ಮೂಡುಮಾರ್ನಾಡು ಗ್ರಾಮದ ಹೊನ್ನೊಟ್ಟು ನಿವಾಸಿ ದಿನಕರ ಎಂಬವರು ಕಳೆದೊಂದು ವರ್ಷದಿಂದ ಕಿಡ್ನಿಗಳ ವೈಫಲ್ಯದಿಂದ ಬಳಲುತ್ತಿದ್ದು, ಸಹೃದಯರ ನೆರವಿನ ನಿರೀಕ್ಷೆಯಲ್ಲಿದ್ದಾರೆ.
ಮುಂಬೈ ಹಾಗೂ ವಾಮಂಜೂರಿನಲ್ಲಿ ಹೋಟೆಲ್ ಕಾರ್ಮಿಕರಾಗಿ ದುಡಿಯುತ್ತಿದ್ದ ದಿನಕರ್‌ರಿಗೆ ಕಿಡ್ನಿ ವೈಫಲ್ಯವಿರುವುದು ವರ್ಷದ ಹಿಂದೆ ಗೊತ್ತಾಗಿದೆ. ಮನೆಗೆ ಆಧಾರವಾಗಿರುವ ದಿನಕರ್‌ರ ಅನಾರೋಗ್ಯದಿಂದ ಅವರ ಕುಟುಂಬ ಕಂಗಾಲಾಗಿದೆ. ಅವರ ಪತ್ನಿ ಬೀಡಿ ಕಟ್ಟಿ ಜೀವನ ಸಾಗಿಸುತ್ತಿದ್ದು, ಇಬ್ಬರು ಮಕ್ಕಳಿದ್ದಾರೆ.
ಮೂಲತಃ ಮೂಡುಮಾರ್ನಾಡು ಹೊನ್ನೊಟ್ಟು ತಂಡ್ರಕೆರೆಯ ನಿವಾಸಿಯಾಗಿರುವ ದಿನಕರ್, ಮಂಗಳೂರಿನ ಆಸ್ಪತ್ರೆಗೆ ಚಿಕಿತ್ಸೆಗೆ ತೆರಳಲು ಸುಲಭವಾಗುವಂತೆ ಹೊಸ್ಮಾರಿನ ಸಂಬಂಧಿಕರ ಮನೆಯಲ್ಲಿ ಪತ್ನಿ, ಮಕ್ಕಳೊಂದಿಗೆ ವಾಸವಾಗಿದ್ದಾರೆ.
ದಿನಕರ್‌ರ ಡಯಾಲಿಸ್ ಹಾಗೂ ಚಿಕಿತ್ಸೆಗೆ ಪ್ರತಿ ತಿಂಗಳು 30 ಸಾವಿರಕ್ಕೂ ಅಧಿಕ ಖರ್ಚಾಗುತ್ತಿದೆ. ಕಿಡ್ನಿ ಟ್ರಾನ್ಸ್‌ಪ್ಲಾಂಟಿಗ್ ಕ್ರಿಯೆಗೆ 10 ಲಕ್ಷಕ್ಕೂ ಅಧಿಕ ವೆಚ್ಚವಾಗುವುದೆಂದು ವೈದ್ಯರು ತಿಳಿಸಿರುವುದರಿಂದ ಸಹೃದಯರ ನೆರವಿನ ನೀರಿಕ್ಷೆಯಲ್ಲಿ ದಿನಕರ್ ಹಾಗೂ ಕುಟುಂಬದವರಿದ್ದಾರೆ.
ನೆರವು ನೀಡಲು ಇಚ್ಛಿಸುವವರು ಮೂಡುಬಿದಿರೆಯ ಕೆನರಾ ಬ್ಯಾಂಕ್ ಶಾಖೆಯಲ್ಲಿರುವ ದಿನಕರ್‌ರ ಖಾತೆಗೆ ತಮ್ಮಿಂದಾದಷ್ಟು ನೆರವನ್ನು ನೀಡಬಹುದು. ಖಾತೆ ಸಂಖ್ಯೆ: 2764101013420, ಐಎಫ್‌ಎಸ್‌ಸಿ ಕೋಡ್-ಕೆಎನ್‌ಆರ್‌ಬಿ0002764. ವಿಳಾಸ: ದಿನಕರ್, ತಂದೆ- ವೀರಪ್ಪ ಪೂಜಾರಿ,ಹೊನ್ನೊಟ್ಟು ಮನೆ, ಮೂಡುಮಾರ್ನಾಡು, ಮಂಗಳೂರು ತಾಲೂಕು. ದೂ.ಸಂ.: 89716 82349.