ಕೇವಲ ಉಳ್ಳವರಿಗಷ್ಟೇ ಲಾಭ ತರುವ ಮೋದಿಯ ನೂತನ ಬೌದ್ಧಿಕ ಆಸ್ತಿ ಹಕ್ಕು ನೀತಿ
2014ರ ನವಂಬರ್‌ನಲ್ಲಿ ಐದು ರಾಷ್ಟ್ರೀಯ ಸರಕಾರಗಳು ಭಾರತದ ಪ್ರಥಮ ರಾಷ್ಟ್ರೀಯ ಬೌದ್ಧಿಕ ಆಸ್ತಿ ಹಕ್ಕು ನೀತಿಯ (ಐಪಿಆರ್ ನೀತಿ) ಪ್ರಕ್ರಿಯೆ ಬಗ್ಗೆ ಮಾಹಿತಿ ಕೋರಿ ಕೈಗಾರಿಕಾ ನೀತಿ ಮತ್ತು ಪ್ರಚಾರ ಇಲಾಖೆ (ಡಿಐಪಿಪಿ)ಗೆ ಪತ್ರ ಬರೆದಿದ್ದವು. ಡಿಐಪಿಪಿ ಸರಕಾರೇತರ ಸಂಸ್ಥೆಗಳು, ನಾಗರಿಕ ಸಮಾಜ, ಬಹುರಾಷ್ಟ್ರೀಯ ಕಂಪೆನಿಗಳು, ಉದ್ಯಮ ಮತ್ತು ವ್ಯಾಪಾರ ಸಂಸ್ಥೆಗಳು ಮತ್ತು ಇತರ ಕ್ಷೇತ್ರಗಳಿಂದಲೂ 300 ಪತ್ರಗಳನ್ನು ಇಲಾಖೆ ಸ್ವೀಕರಿಸಿದೆ. ಕರಡು ನೀತಿಯನ್ನು ರಚಿಸಲು ನೇಮಿಸಿದ ಮೊದಲ ನಿಯೋಗವನ್ನು ರದ್ದುಪಡಿಸುವ, ಮೊದಲ ಕರಡು ನೀತಿಯನ್ನು ಬಿಡುಗಡೆ ಮಾಡುವಲ್ಲಿ ವಿಳಂಬ ಮತ್ತು ಅಪಾರದರ್ಶಕತೆ, ಬಹುತೇಕ ಸಂಪೂರ್ಣಗೊಂಡಿದ್ದ ಕರಡು ಪ್ರತಿಯ ಸೋರಿಕೆ ಮತ್ತು ಸ್ವೀಕರಿಸಿದ 300 ಪತ್ರಗಳಿಗೆ ಯಾವುದೇ ಪ್ರತಿಕ್ರಿಯೆ ನೀಡದಿರುವುದು ಹೀಗೆ ನೀತಿಯನ್ನು ರಚಿಸುವ ಪ್ರಕ್ರಿಯೆಯೇ ಗೊಂದಲ, ಅನ್ಯಾಯ ಮತ್ತು ವಿವರಿಸಲಾಗದ ಹೆಜ್ಜೆಗಳಿಂದ ಕೂಡಿತ್ತು. ಕೊನೆಯದಾಗಿ ಡಿಐಪಿಪಿ ಕಳೆದ ವಾರ ನೀತಿಯನ್ನು ಬಿಡುಗಡೆ ಮಾಡಿತು.
ಸುದೀರ್ಘ ಮತ್ತು ವಿಸ್ತಾರವಾದ ಕರಡು ಪ್ರಕ್ರಿಯೆಯ ಹೊರತಾಗಿಯೂ ಈ ನೀತಿಯು ಹೊಸ ಆವಿಷ್ಕಾರ ಮತ್ತು ಬೆಳವಣಿಗೆಯನ್ನು ಉತ್ತೇಜಿಸಲು ಅನಗತ್ಯವಾಗಿ ಐಪಿಆರ್‌ನ್ನು ನೆಚ್ಚಿಕೊಳ್ಳುವಂತೆ ಮಾಡುತ್ತದೆ. ಅದು ಈ ಮಾತನ್ನು ತಿರಸ್ಕರಿಸಿದರೂ ಈ ನೀತಿಯ ರಚನೆಯಲ್ಲಿ ಕೆಲವು ಮೂಲಭೂತ ಪ್ರಮಾದಗಳಾಗಿದ್ದು ಇದು ಡಿಐಪಿಪಿಯ ವಾದವನ್ನು ಅರ್ಥಹೀನವಾಗಿಸುತ್ತದೆ. ಐಪಿಆರ್ ವಿಷಯದ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸುವುದಾದರೆ, ಅದು ಸಮತೋಲಿತ ಬೌದ್ಧಿಕ ಆಸ್ತಿ (ಐಪಿ) ಪ್ರಭುತ್ವದ ತತ್ವಕ್ಕೆ ಸಂಬಂಧಪಟ್ಟ ವಿಷಯವಾಗಿದೆ, ಅಂದರೆ, ಸಾಕಷ್ಟು ಮಿತಿಗಳನ್ನು ಹೊಂದಿರುವ ಸಮತೋಲಿತ ಹಕ್ಕುಗಳು, ದೇಶದ ಅರ್ಥಪೂರ್ಣ ಅಭಿವೃದ್ಧಿ ಮತ್ತು ಬೆಳವಣಿಗೆಗೆ ಅತ್ಯುತ್ತಮವಾಗಿ ಕಾಣಿಕೆ ನೀಡುವ ಒಂದು ಮಾದರಿಯಾಗಿದೆ. ಮಿತಿಗಳು ಮತ್ತು ಹೊರತುಪಡಿಸುವಿಕೆ, ಐಪಿಆರ್‌ಗಳು ನೀಡುವ ಸಂಪೂರ್ಣ ಏಕಸ್ವಾಮ್ಯತೆಯನ್ನು ಕಡಿಮೆಗೊಳಿಸಲು ಮತ್ತು ಐಪಿ ಹಕ್ಕು ಹೊಂದಿರುವವರ ವಾದಗಳು ಔಷಧ, ಶಿಕ್ಷಣ ಮತ್ತು ಸಂಶೋಧನೆ ಮುಂತಾದ ವಿಷಯಗಳ ಉಪಯೋಗ ಮತ್ತು ಹಂಚಿಕೆಯನ್ನು ರದ್ದುಪಡಿಸುವುದಿಲ್ಲ ಎಂಬುದನ್ನು ಖಾತರಿಪಡಿಸಿಕೊಳ್ಳಲು ಕಾನೂನಿನಲ್ಲಿ ನಮ್ಯತೆಗಳು. ಅತ್ಯಂತ ದೊಡ್ಡ ಅಂತಾರಾಷ್ಟ್ರೀಯ ಒಪ್ಪಂದ ಆಡಳಿತ ನಡೆಸುವ ದೇಶದ ಐಪಿಆರ್ ಪ್ರಭುತ್ವವಾಗಿರುವ ಬೌದ್ಧಿಕ ಆಸ್ತಿ ಹಕ್ಕುಗಳ ಒಪ್ಪಂದದ ವ್ಯಾಪಾರ ಸಂಬಂಧಿ ವಿಭಾಗ ಕೂಡಾ ಸಮತೋಲಿತ ಪ್ರಭುತ್ವವನ್ನು ಸ್ಥಾಪಿಸಲು ಈ ನಮ್ಯತೆಗಳನ್ನು ಬೆಂಬಲಿಸುತ್ತದೆ. ನೀತಿಯು ಸಾಂದರ್ಭಿಕವಾಗಿ ಟಿಆರ್‌ಐಪಿಎಸ್ ಒಪ್ಪಂದದ ಬಗ್ಗೆ ಅದಕ್ಕಿರುವ ಬದ್ಧತೆ ಮತ್ತು ದೋಹಾ ಘೋಷಣೆಯನ್ನು ಪ್ರಸ್ತಾಪಿಸುತ್ತದೆ. ಆದರೆ ಯಾವುದೇ ಹೊಸ ದೃಢವಾದ ಹೆಜ್ಜೆಯ ಬಗ್ಗೆ ಯಾವುದೇ ಪ್ರಸ್ತಾಪ ಮಾಡುವುದಿಲ್ಲ. ಹಾಗಾಗಿ ಅದು ಸಮತೋಲಿತ ಪ್ರಭುತ್ವವನ್ನು ಎತ್ತಿಹಿಡಿಯುವ ಅಥವಾ ಪ್ರೋತ್ಸಾಹಿಸುವ ಬಗ್ಗೆ ಗಂಭೀರವಾಗಿ ಚಿಂತಿಸುವಲ್ಲಿ ವಿಫಲವಾಗುತ್ತದೆ.
ನೀತಿಯ ದೌರ್ಭಾಗ್ಯವೆಂಬಂತೆ, ದೂರದೃಷ್ಟಿತ್ವವಿಲ್ಲದ ತಾರ್ಕಿಕತೆ ಈ ಮಸೂದೆಯ ಮಹಾತ್ವಾಕಾಂಕ್ಷೆಯನ್ನು ಸೆರೆಹಿಡಿಯುತ್ತದೆ. ನೀತಿಯ ದಾಖಲೆಯು, ತಾರ್ಕಿಕತೆಯು..... ಮಾರುಕಟ್ಟೆ ಯೋಗ್ಯ ಆರ್ಥಿಕ ಸಂಪತ್ತು ಮತ್ತು ಆರ್ಥಿಕ ಸಾಧನವಾಗಿ ಐಪಿಆರ್‌ಎಸ್ ಪ್ರಾಮುಖ್ಯತೆಯ ಬಗ್ಗೆ ಜಾಗೃತಿ ಮೂಡಿಸುವುದರಲ್ಲಿದೆ ಎಂದು ತಿಳಿಸುತ್ತದೆ. ಅದರಂತೆ, ಈ ನೀತಿಯು ಐಪಿಆರ್‌ನಲ್ಲಿ ನಮೂದಿಸಿರುವ ಕಲ್ಯಾಣದ ತತ್ವ ಮತ್ತು ಸಮತೋಲನವನ್ನು ಗುರುತಿಸುವಲ್ಲಿ ವಿಫಲವಾಗುತ್ತದೆ: ಹೊಸ ಆವಿಷ್ಕಾರದ ಭರವಸೆ, ಸಾಮಾಜಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಅಭಿವೃದ್ಧಿ ಮತ್ತು ಜ್ಞಾನದತ್ತ ಮುಂದುವರಿಕೆ. ಆರ್ಥಿಕ ಬೆಳವಣಿಗೆ ಮತ್ತು ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿಯನ್ನು ಸಾಧಿಸುವುದರ ಜೊತೆಗೆ ಸಾರ್ವಜನಿಕ ಹಿತಾಸಕ್ತಿಯನ್ನು ಕಾಪಾಡುವ: ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ, ಕಲೆ ಮತ್ತು ಸಂಸ್ಕೃತಿ, ಸಾಂಪ್ರದಾಯಿಕ ಜ್ಞಾನ ಮತ್ತು ಜೀವವೈವಿಧ್ಯ, ಜ್ಞಾನ ಸಂಪಾದನೆಯ ಜೊತೆಗೆ ಜ್ಞಾನದ ಹಂಚಿಕೆ ಮುಂತಾದ ವಿಷಯಗಳ ಬಗ್ಗೆ ಗೌರವಪೂರ್ಣ ಕಾಣಿಕೆ ನೀಡುತ್ತದೆ. ಆದರೆ ಐಪಿಆರ್‌ನ್ನು ಕೇವಲ ಹಕ್ಕು ಹೊಂದಿರುವವರ ಹಿತಾಸಕ್ತಿಯನ್ನು ಕಾಯುವ ಒಂದು ಸಾಧನವಾಗಿ ನೋಡುವುದಕ್ಕಿಂತ ಮೇಲೆ ಅದು ಏರುವುದಿಲ್ಲ.
ಐಪಿಆರ್‌ನ ವೈಭವೀಕರಣದ ಏಕೈಕ ಉದ್ದೇಶ ಹೊಂದದೇ ಇದ್ದಾಗ ಮಾತ್ರ ಬೃಹತ್ ಪ್ರಚಾರಗಳ ಮೂಲಕ ಐಪಿಆರ್ ಬಗ್ಗೆ ಜಾಗೃತಿಯನ್ನು ಮೂಡಿಸುವ ಈ ನೀತಿಯ ಪ್ರಯತ್ನವನ್ನು ಒಪ್ಪಬಹುದು. ಇದು ಯಾವ ಹಂತಕ್ಕೆ ತಲುಪಿದೆಯೆಂದರೆ ಈ ವಿಭಾಗ ಐಪಿಆರ್ ಬಗ್ಗೆ ಸಮಾಜದಲ್ಲಿ ಗುಣಾತ್ಮಕತೆ ತರಲು ಯುವ ವಿದ್ಯಾರ್ಥಿಗಳಿಗೆ ಐಪಿಆರ್‌ನ ಲಾಭಗಳ ಬಗ್ಗೆ ಬೋಧಿಸಲು ಅನೇಕ ಹೆಜ್ಜೆಗಳನ್ನು ಅನುಷ್ಠಾನಕ್ಕೆ ತರುತ್ತದೆ. ನನ್ನ ಅಭಿಪ್ರಾಯದಲ್ಲಿ ಸಂಶೋಧನಾ ಕೇಂದ್ರಗಳಲ್ಲಿ ಮತ್ತು ಕೈಗಾರಿಕೆಗಳಲ್ಲಿ ಜಾಗೃತಿ ಮೂಡಿಸುವುದು ಮುಖ್ಯವಾಗಿದ್ದರೂ ಐಪಿಆರ್ ಬಗ್ಗೆ ಜಾಗೃತಿಗಾಗಿ ಒಂದೇ ಕಡೆ ವಾಲಿದ ಹಕ್ಕು ಕೇಂದ್ರಿತ ಗುಣಾತ್ಮಕ ದೃಷ್ಟಿಕೋನವನ್ನು ಬೆಂಬಲಿಸಕೂಡದು. ಇದು ಅಪಾಯಕಾರಿ ದೃಷ್ಟಿಕೋನ ಮತ್ತು ಐಪಿಯನ್ನು ಸೃಷ್ಟಿಸಲು ಮತ್ತು ಹಕ್ಕುಗಳನ್ನು ಪಡೆಯಲು ಹುಚ್ಚು ಓಟವನ್ನು ಇದು ಸೃಷ್ಟಿಸಬಹುದು. ದುರದೃಷ್ಟವಶಾತ್ ಈ ಕೆಲಸದಲ್ಲಿ ಸರಕಾರ ಕೂಡಾ ಜೊತೆಯಾಗಿದೆ. ನಾನು ಇದನ್ನು ಹೇಗೆ ಹೇಳಿದೆನೆಂದರೆ ಇತ್ತೀಚೆಗೆ ನಡೆದ ಒಂದು ರಾಷ್ಟ್ರೀಯ ಸಮಾವೇಶದಲ್ಲಿ ಭಾರತೀಯ ಪೇಟೆಂಟ್ ಕಚೇರಿಯ ಹಿರಿಯ ಅಧಿಕಾರಿ ಮತ್ತು ಡಿಐಪಿಪಿ ಅಧಿಕಾರಿಗಳು ಈ ದೃಷ್ಟಿಕೋನವನ್ನು ಪ್ರತಿಪಾದಿಸಿದ್ದರು.
ದಿಗ್ಭ್ರಮೆಗೊಳಿಸುವ ಐಪಿಆರ್ ಸೃಷ್ಟಿಸಲು ಐಪಿಆರ್ ಸಿದ್ಧಾಂತಕ್ಕೆ ಐಪಿಆರ್ ನೀತಿಯನ್ನು ಸಾಧನವಾಗಿ ಬಳಸುವ ಕಲ್ಪನೆ ಭಾರತ ಸರಕಾರಕ್ಕೆ ಚೀನಾದಿಂದ ಬಂದಿರಬಹುದು. 1995ರಲ್ಲಿ ಚೀನಾ ಅಧಿಕಾರಿಗಳು, ಸಂಶೋಧಕರು ಮತ್ತು ವಿದ್ಯಾರ್ಥಿಗಳು ಐಪಿಆರ್ ಉತ್ಪಾದನೆಯನ್ನು ಜನಪ್ರಿಯಗೊಳಿಸಲು ಸವಿವರವಾದ ತರಬೇತಿಯನ್ನು ನಡೆಸಲು ಆರಂಭಿಸಿತು. ಕಳೆದ ವರ್ಷ ಚೀನಾವು ಹತ್ತು ಲಕ್ಷ ಪೇಟೆಂಟ್ ಮನವಿಗಳನ್ನು ಪಡೆದಿದೆ-ಇದು ಅಂತಾರಾಷ್ಟ್ರೀಯ ದಾಖಲೆಯಾಗಿದೆ. ಸಮಾವೇಶದಲ್ಲಿ ಅಧಿಕಾರಿಗಳು ಚೀನಾದ ತಂತ್ರದಿಂದ ಮಂತ್ರಮುಗ್ಧರಾಗಿದ್ದರು ಮತ್ತು ಕೆಲವೇ ವರ್ಷಗಳಲ್ಲಿ ಈ ಸಾಧನೆಯನ್ನು ಸರಿಗಟ್ಟುವ ಭರವಸೆ ಹೊಂದಿದ್ದರು. ಆದರೆ ನಿಜಾಂಶವೆಂದರೆ, ಚೀನಾದಲ್ಲಿ ಪೇಟೆಂಟ್‌ಗಾಗಿ ಆವಿಷ್ಕಾರ ನಡೆಸುವ ಸ್ಪರ್ಧೆಯಿಂದಾಗಿ ಕಡಿಮೆ ಗುಣಮಟ್ಟದ ಸಂಶೋಧನೆಗಳು ಹೆಚ್ಚಿನ ಸಂಖ್ಯೆಯಲ್ಲಿ ನಡೆಯಲು ಆರಂಭಿಸಿದ್ದವು. ಚೀನಾದ ಪೇಟೆಂಟ್‌ಗಳಲ್ಲಿ ಶೇ.1ಕ್ಕೂ ಕಡಿಮೆ ಸಾಧಾರಣ ಅಥವಾ ಅತ್ಯುತ್ತಮ ಗುಣಮಟ್ಟವನ್ನು ಹೊಂದಿದೆ. ಹಾಗಾಗಿ, ಚೀನಾವು ಹೆಚ್ಚು ಪೇಟೆಂಟ್ ದಾಖಲಾತಿಯನ್ನು ತೋರಿಸಿದರೂ ಅದರ ಆವಿಷ್ಕಾರ ನಿರ್ವಹಣೆ ಮಾತ್ರ ಕಳಪೆಯಾಗಿದೆ. ಪೇಟೆಂಟ್ ದಾಖಲಾತಿಗೂ ಮತ್ತು ಒಂದು ದೇಶದ ಒಟ್ಟಾರೆ ಸಂಶೋಧನಾ ನಿರ್ವಹಣೆಗೂ ಯಾವುದೇ ಸಂಬಂಧವಿಲ್ಲ ಎಂಬುದನ್ನು ರುಜುವಾತು ಮಾಡಲು ಜಾಗತಿಕವಾಗಿ ಸಾಕಷ್ಟು ಪುರಾವೆಗಳು ಲಭಿಸುತ್ತವೆ.
ಇನ್ನು, ಐಪಿಆರ್ ಉತ್ಪಾದನೆಯನ್ನು ಹೆಚ್ಚುಗೊಳಿಸುವ ಹಾದಿಯಲ್ಲಿ ಸಾರ್ವಜನಿಕ ಬಂಡವಾಳದಲ್ಲಿ ಐಪಿಆರ್ ಸಂಶೋಧಿಸುವುದನ್ನು ಈ ನೀತಿಯು ಕಠಿಣಗೊಳಿಸುತ್ತದೆ. ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಗಳು ಮತ್ತು ಕಾಲೇಜುಗಳು ಐಪಿಆರ್ ಸೃಷ್ಟಿಯ ಆಧಾರದ ಮೇಲೆ ಪ್ರಶಸ್ತಿಗಳನ್ನು ನೀಡಬೇಕು ಎಂದು ಅದು ಸಲಹೆ ನೀಡುವ ಪರಿಣಾಮವಾಗಿ ಇದು ಐಪಿಆರ್ ಕೇಂದ್ರಿತ ಸಂಶೋಧನೆಗೆ ಪ್ರೋತ್ಸಾಹ ನೀಡುತ್ತದೆ. ಇಂಥಾ ದೃಷ್ಟಿಕೋನ, ಐಪಿಆರ್ ಆದಾಯಕ್ಕೆ ಸಂಬಂಧಪಟ್ಟಂತೆ ಕಡಿಮೆ ಲಾಭಗಳಿಸುವ ಕ್ಷೇತ್ರಗಳ ಸಂಶೋಧನೆಗಳು ನಿರ್ಲಕ್ಷ್ಯಕ್ಕೆ ಒಳಗಾಗುವಂತೆ ಮಾಡುತ್ತದೆ. ಈಗಷ್ಟೇ ಬೆಳೆಯುತ್ತಿರುವ ಸಂಶೋಧನಾ ಮತ್ತು ಅಭಿವೃದ್ಧಿ ಕ್ಷೇತ್ರವು ಈ ರೀತಿಯ ರಚನೆಯನ್ನು ಹೊಂದಬೇಕೆಂದು ನಾವು ಬಯಸುತ್ತೇವೆಯೇ? ಕೇವಲ ವ್ಯಾಪಾರವನ್ನು ಉದ್ದೇಶಕ್ಕಾಗಿ ಡಿಐಪಿಪಿಯು ಅದ್ಯಾವ ರೀತಿಯಲ್ಲಿ ಈ ನೀತಿಯನ್ನು ಆಡಳಿತ ಗಟ್ಟಿಗೊಳಿಸಲು, ಜಾರಿಗೊಳಿಸಲು ಮತ್ತು ಇಡೀ ಯಂತ್ರವನ್ನು ನಿಯಂತ್ರಣದಲ್ಲಿಡಲು ಬಳಸಿದೆ ಎಂಬುದನ್ನು ನೋಡಲು ಖೇದವಾಗುತ್ತದೆ. ಈ ನೀತಿಯು ಇತರ ಸರಕಾರಿ ಇಲಾಖೆಗಳು ಜ್ಞಾನವನ್ನು ಪಡೆಯಲು ಅವಕಾಶ ಮತ್ತು ಸಾಂಪ್ರದಾಯಿಕವಾಗಿ ಐಪಿಆರ್ ಮುಂತಾದ ಅಡೆತಡೆಗಳಿಂದ ನಿಯಂತ್ರಣಗೊಳಪಟ್ಟಿದ್ದ ವಿಷಯಗಳಲ್ಲಿನ ಮುಕ್ತತೆ ತರಲು ತೆಗೆದುಕೊಂಡ ಹೆಜ್ಜೆಗಳಿಗೆ ವಿರುದ್ಧವಾಗಿದೆ. ಉದಾಹರಣೆಗೆ, ಜೈವಿಕ ತಂತ್ರಜ್ಞಾನ ಇಲಾಖೆ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಎಲ್ಲಾ ಸಂಶೋಧಕರಿಗೆ ಅನ್ವಯವಾಗುವ ಮುಕ್ತ ಅವಕಾಶ ನೀತಿಯನ್ನು ಹೊಂದಿವೆ-ಈ ನೀತಿಯು ಸಾರ್ವಜನಿಕ ಬಂಡವಾಳದಿಂದ ನಡೆಸುವ ಸಂಶೋಧನೆಗಳಿಂದ ಉಂಟಾಗುವ ಎಲ್ಲಾ ಪ್ರಕಟಣೆಗಳು ಉಚಿತವಾಗಿ ಸಿಗುವಂತೆ ಮಾಡುತ್ತದೆ. ಕಾನೂನು ಮತ್ತು ನ್ಯಾಯ ಸಚಿವಾಲಯ ಸರಕಾರಿ ದತ್ತಾಂಶದ ಹಂಚಿಕೆಯನ್ನು ಮಾಡಲು ಸಾಧ್ಯವಾಗುವಂಥಾ ಪರವಾನಿಗೆಯನ್ನು ರೂಪಿಸುವ ಪ್ರಕ್ರಿಯೆಯಲ್ಲಿ ತೊಡಗಿದೆ. ಮುಂದೆ, ಫಾರ್ಮಾ
ಭಾರತದ ಔಷಧೋದ್ಯಮವು ಜಗತ್ತಿನಾದ್ಯಂತ ಕೈಗೆಟಕುವ ಬೆಲೆಯಲ್ಲಿ ಔಷಧಿಗಳನ್ನು ಒದಗಿಸುವ ಮೂಲಕ ಜೀವರಕ್ಷಕನಾಗಿ ಪರಿಣಮಿಸಿದೆ. ಪೇಟೆಂಟ್‌ಗಳನ್ನು ಸದಾ ಊರ್ಜಿತದಲ್ಲಿರುವುದನ್ನು ಪರಿಶೀಲಿಸಲು ಇರುವ ಅತ್ಯಂತ ಗಂಭೀರವಾದ ಸಾಧನವೆಂದರೆ 1970ರ ಪೇಟೆಂಟ್ ಆ್ಯಕ್ಟ್‌ನ ಸೆಕ್ಷನ್ 3(ಡಿ). ಈ ವಿಧಿಯನ್ನು ಕಡ್ಡಾಯ ಪರವಾನಿಗೆ ಯಂತ್ರದ ಜೊತೆಗೆ ಬೃಹತ್ ಔಷಧಿ ಸಂಸ್ಥೆಗಳಿಂದ ನಿರಂತರ ದಾಳಿಗೆ ಒಳಗಾಗಿದೆ. ಆದರೆ ನೀತಿಯು ಇಂಥಾ ಸಾಧನಗಳನ್ನು ಪರಿಣಾಮಕಾರಿಯಾಗಿ ಬಳಸುವ ಬಗ್ಗೆ ಅದರ ಬದ್ಧತೆಯನ್ನು ವ್ಯಕ್ತಪಡಿಸುವುದಿಲ್ಲ. ಹೆಚ್ಚಾಗಿ, ಪೇಟೆಂಟ್ ಹೊಂದಿರುವವರು ದಾಖಲಿಸಬೇಕಾದ ಫಾರ್ಮ್ 27ನ್ನು ಜಾರಿಗೊಳಿಸುವ ಬಗ್ಗೆ ಒತ್ತಡ ಹೇರಲು ಇದ್ದಂತಹ ಅವಕಾಶವನ್ನೂ ಈ ನೀತಿ ಕಳೆದುಕೊಂಡಿದೆ. ಒಂದು ಪೇಟೆಂಟ್ ಒಂದು ಪ್ರದೇಶದಲ್ಲಿ ಕೆಲಸ ಮಾಡಬಹುದು ಅಥವಾ ಮಾಡದಿರಬಹುದು, ಒಂದು ವೇಳೆ ಸರಿಯಾಗಿ ಕೆಲಸ ಮಾಡದಿದ್ದರೆ ಮೂರನೇ ಪಕ್ಷ ಕಡ್ಡಾಯ ಪರವಾನಿಗೆಗಾಗಿ ಅರ್ಜಿ ಹಾಕಬಹುದು ಎಂದು ಫಾರ್ಮ್ 27 ಪ್ರತಿಪಾದಿಸುತ್ತದೆ.
ಆದರೆ ಭಾರತೀಯ ಪೇಟೆಂಟ್ ಕಚೇರಿ ಮತ್ತು ಪೇಟೆಂಟ್ ಹೊಂದಿರುವವರು ಸಮಯೋಚಿತವಾಗಿ ಫಾರ್ಮ್ 27ನ್ನು ನೀಡುವಲ್ಲಿ ನಿರ್ಲಕ್ಷ್ಯ ವಹಿಸಿದ್ದಾರೆ. ಈ ನೀತಿಯು ಕೆಲವು ವಿಷಯಗಳಲ್ಲಿ ಹೆಚ್ಚು ಆಳವಾಗಿ ಪ್ರಸ್ತಾಪಿಸುತ್ತದೆ. ಅಕ್ರಮವಾಗಿ ಸಿನೆಮಾಗಳನ್ನು ನಕಲು ಮಾಡುವುದರ ವಿರುದ್ಧ ಪ್ರತ್ಯೇಕ ಕಾನೂನು ಸೃಷ್ಟಿಸಬೇಕೆಂದು ಅದು ಪ್ರತಿಪಾದಿಸುತ್ತದೆ, ಆದರೆ ಇದು ಸಂಪೂರ್ಣವಾಗಿ ಅನಗತ್ಯ ಮತ್ತು ಮಿತಿಮೀರಿದ್ದಾಗಿದೆ. ಮುಖ್ಯವಾಗಿ ಒಂದು ಉಲ್ಲಂಘನೆಯಾಗಿದ್ದು, ಈಗಾಗಲೇ ಶಿಕ್ಷಾರ್ಹ ಅಪರಾಧ (ಭಾರತೀಯ ಕಾಪಿರೈಟ್ ಆ್ಯಕ್ಟ್, 1957)ವಾಗಿರುವುದಕ್ಕೆ ಹೊಸ ಕ್ರಿಮಿನಲ್ ಕಾನೂನನ್ನು ಜಾರಿಗೆ ತರಲು ಸೂಚಿಸುವುದು ಸಿನೆಮಾ ಜಗತ್ತಿನ ಲಾಬಿಯಿಂದಲೇ ನಡೆದಿರುವಂಥದ್ದು. ಕೊನೆಯದಾಗಿ, ನೀತಿಯು ಎಲ್ಲ್ಲ ಐಪಿಆರ್ ಕಚೇರಿಗಳ ಸಾಮರ್ಥ್ಯವನ್ನು ಹೆಚ್ಚಿಸಲು ಉದ್ದೇಶಿಸಿರುವುದು ಶ್ಲಾಘನೀಯವಾದರೂ ಈ ನೀತಿಯು ಒಂದು ಸಮತೋಲಿತ ಐಪಿ ಪ್ರಭುತ್ವವನ್ನು ಪೋಷಿಸಲು ಮತ್ತು ರಕ್ಷಿಸಲು ಸಮರ್ಥವಾಗಿದೆ ಎಂಬುದನ್ನು ಹೇಳುವುದು ಕಷ್ಟ.
ಐಪಿಆರ್ ಉತ್ಪಾದನೆ ಮತ್ತು ಒಟ್ಟಾರೆ ಸಂಶೋಧನೆಯ ಮಧ್ಯೆ ಹುಳುಕುಗಳನ್ನು ಹೊಂದಿರುವ ಊಹೆಯು ದಾಖಲೆಯನ್ನು ಬಲಪಡಿಸುತ್ತದೆ, ಆದರೆ ಇದು ಯಾವುದೇ ರಾಷ್ಟ್ರೀಯ ಐಪಿಆರ್ ನೀತಿಯಲ್ಲಿ ಜಾಗ ಹೊಂದಿರಬಾರದಿತ್ತು. ಅಭಿವೃದ್ಧಿ ಹೊಂದಿದ ಆರ್ಥಿಕತೆ ಮತ್ತು ಸಮಾಜಕ್ಕೆ ಪೂರಕವಾಗಿ ತನ್ನ ಐಪಿಆರ್ ಪ್ರಭುತ್ವವನ್ನು ಬಲಗೊಳಿಸುವಂತೆ ಭಾರತದ ಮೇಲೆ ಪಾಶ್ಚಾತ್ಯ ಸರಕಾರಗಳು ಮತ್ತು ಕೈಗಾರಿಕಾ ಲಾಬಿಯಿಂದ ಒತ್ತಡವಿತ್ತು ಎಂಬುದು ಎಲ್ಲರಿಗೂ ತಿಳಿದ ವಿಷಯ. ಶೀಘ್ರವಾಗಿ ಬೆಳವಣಿಗೆ ಕಾಣುತ್ತಿರುವ ಭಾರತ ತನ್ನ ವಿಶಿಷ್ಟ ಅಭಿವೃದ್ಧಿ ಅಗತ್ಯಗಳನ್ನು ಇನ್ನಷ್ಟು ಹೆಚ್ಚು ಸಮತೋಲಿತ ಮತ್ತು ಸ್ವಲ್ಪ ವ್ಯತ್ಯಾಸದ ಐಪಿಆರ್ ನೀತಿಯ ಮೂಲಕ ಪಡೆಯಬಹುದಿತ್ತು. ಆದರೆ ಸದ್ಯ ನಡೆದಿರುವ ಬದಲಾವಣೆಗಳು ಮುಖ್ಯವಾಗಿ ಸಮಾಜದ ಸಣ್ಣ ಗುಂಪಿಗಷ್ಟೇ ಲಾಭ ತರಲಿದೆ ಪ್ರಮುಖವಾಗಿ ಆಳ ಜೇಬು ಹೊಂದಿರುವವರು ಮತ್ತು ಪ್ರಭಾವಿಗಳು.