ಮುಲ್ಕಿ: ನೇಣುಬಿಗಿದು ವ್ಯಕ್ತಿ ಆತ್ಮಹತ್ಯೆ
Update: 2016-05-26 23:09 IST
ಮುಲ್ಕಿ, ಮೇ 26; ವ್ಯಕ್ತಿಯೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮುಲ್ಕಿ ಠಾಣಾ ವ್ಯಾಪ್ತಿಯ ಕೆನರಾ ಬ್ಯಾಂಕ್ ಬಳಿ ನಡೆದಿದೆ.
ಕೆನರಾ ಬ್ಯಾಂಕ್ ಬಳಿ ನಿವಾಸಿ ರಹ್ಮತ್ ಅಲಿ (44) ಎಂಬವರು ಆತ್ಮ ಹತ್ಯೆ ಮಾಡಿಕೊಂಡವರು.
ಕೆಲದಿನಗಳ ಹಿಂದೆ, ಇವರ ಪತ್ನಿ ಹೆರಿಗೆಗೆಂದು ಕೋಡಿಕಲ್‌ನ ತವರು ಮನೆಗೆ ತೆರಳಿದ್ದರು. ಆ ಸಂದರ್ಭ ರಹ್ಮತ್ ಅಲಿಯವರೂ ಅಲ್ಲೇ ನೆಲೆಸಿದ್ದರು ಎನ್ನಲಾಗಿದೆ. ಗುರುವಾರ ಬೆಳಗ್ಗೆ ಪತ್ನಿ ಮನೆಯಿಂದ ಬಂದವರು ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಆತ್ಮ ಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಈ ಸಂಬಂಧ ಮುಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.