ಹೈಲ್ಯಾಂಡ್ ಇಸ್ಲಾಮಿಕ್ ಫಾರಂಗೆ ಪದಾಧಿಕಾರಿಗಳ ಆಯ್ಕೆ
Update: 2016-05-26 23:30 IST
ಮಂಗಳೂರು,ಮೇ 26: ಹೈಲಾಂಡ್ ಇಸ್ಲಾಮಿಕ್ ಫಾರಂ (ಎಚ್‌ಐಎಫ್) ನ ವಾರ್ಷಿಕ ಮಹಾಸಭೆಯು ಇತ್ತೀಚೆಗೆ ನಗರದ ವಾಸ್‌ಲೇನ್‌ನಲ್ಲಿರುವ ಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ನೆರವೇರಿತು.
ಚುನಾವಣಾ ಅಧಿಕಾರಿಯಾಗಿ ಹೋಪ್ ಫೌಂಡೇಶನ್ ಟ್ರಸ್ಟ್‌ನ ಮುಹಮ್ಮದ್ ಫಯಾಝ್ ಭಾಗವಹಿಸಿದ್ದರು. ಸಂಸ್ಥೆಯ ನೂತನ ಅಧ್ಯಕ್ಷರಾಗಿ ನಾಜಿಂ ಎಸ್.ಎಸ್.ರನ್ನು ಚುನಾವಣಾ ಮೂಲಕ ಆಯ್ಕೆ ಮಾಡಲಾಯಿತು.
ಕಾರ್ಯದರ್ಶಿಯಾಗಿ ಔಸಾಫ್ ಹುಸೈನ್, ಕೋಶಾಧಿಕಾರಿಯಾಗಿ ಸಾಜಿದ್ ಎ.ಕೆ. ಸರ್ವಾನುಮತದಿಂದ ಆಯ್ಕೆಯಾದರು.
ಹನೀಫ್ ಪಿ.ಎಸ್. ದಾವಾಸೆಲ್ ಸಂಚಾಲಕರಾಗಿ , ಮುಹಮ್ಮದ್ ರಿಝ್ವನ್ ಮೆಡಿಕಲ್ ಸೆಲ್‌ನ ಸಂಚಾಲಕರಾಗಿ , ಸುಹೈಲ್ ಬೋಳಾರ್ ಸ್ಟೂಡೆಂಟ್ ವಿಂಗ್‌ನ ಸಂಚಾಲಕರಾಗಿ ಹಾಗೂ ನಾಜಿಂ ಎ.ಕೆ. ಸಮಾಜ ಸೇವಾ ಘಟಕದ ಸಂಚಾಲಕರಾಗಿ ಆಯ್ಕೆಯಾದರೆಂದು ಪ್ರಕಟನೆ ತಿಳಿಸಿದೆ.