ಬೆಳ್ತಂಗಡಿ: ಸಿರಿ ಸಂಸ್ಥೆಗೆ ಮಹಾರಾಷ್ಟ್ರದ ಸಚಿವ ರಾಜ್ ಕುಮಾರ್ ಭೇಟಿ
Update: 2016-05-26 23:39 IST
ಬೆಳ್ತಂಗಡಿ, ಮೇ 26: ಮಹಾರಾಷ್ಟ್ರ ರಾಜ್ಯ ಸರಕಾರದ ಸಾಮಾಜಿಕ ನ್ಯಾಯ ಮತ್ತು ವಿಶೇಷ ನೆರವು ಖಾತೆಯ ಸಚಿವ ರಾಜ್‌ಕುಮಾರ್, ಮಹಾರಾಷ್ಟ್ರ ಗೋಂಧಿ ಜಿಪಂ ಉಪಾಧ್ಯಕ್ಷೆ ರಚನಾ ಗಹಾನಿ ಇವರು ಸಿರಿ ಸಂಸ್ಥೆಗೆ ಭೇಟಿ ನೀಡಿ ಸಿರಿ ಸಂಸ್ಥೆಯ ಚಟುವಟಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಸಿರಿ ಸಂಸ್ಥೆಯ ನಿರ್ದೇಶಕಿಂ ಮನೋರಮ ಭಟ್ ಸಂಸ್ಥೆಯ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು.
ಸಿರಿ ಸಂಸ್ಥೆಯ ಟೆಕ್ಸ್‌ಟೈಲ್ ಜನರಲ್ ಮ್ಯಾನೇಜರ್ ಪ್ರಸನ್ನ, ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ರೂಪಾ ಜೈನ್ ಉಪಸ್ಥಿತರಿದ್ದರು.