ಕೋಟಿ ಚೆನ್ನಯ ವೃತ್ತ ನಿರ್ಮಾಣ ಸಮಿತಿ ಮೂರನೆ ವರ್ಷಾಚರಣೆ
Update: 2016-05-26 23:45 IST
ಮಂಗಳೂರು, ಮೇ 26: ನಗರದ ಕಂಕನಾಡಿ-ಮಾರ್ಗನ್‌ಗೇಟ್ ರಸ್ತೆ ನಡುವಿನ ಕೋಟಿಚೆನ್ನಯ ವೃತ್ತ ನಿರ್ಮಾಣ ಸಮಿತಿಯ ಮೂರನೆ ವರ್ಷಾಚರಣೆಗೆ ಸ್ಥಳೀಯರಾದ ಚಂದ್ರಹಾಸ ಆಡ್ಯಂತಾಯ ದೀಪ ಬೆಳಗಿಸಿ ಚಾಲನೆ ನೀಡಿದರು.
ಮನಪಾ ಸದಸ್ಯೆ ಶೈಲಜಾ, ಧಾರ್ಮಿಕ ಪರಿಷತ್‌ನ ಮಾಜಿ ಸದಸ್ಯ ಕೆ.ಟಿ.ಸುವರ್ಣ,ಆರ್‌ಟಿಒ ಇನ್‌ಸ್ಪೆಕ್ಟರ್ ಚರಣ್ ಕುಮಾರ್, ಉದ್ಯಮಿ ಉಮೇಶ್ ಜಪ್ಪು, ಕೋಟಿ ಚೆನ್ನಯ ಸಮಿತಿಯ ಅಧ್ಯಕ್ಷ ಮೋಹನ್ ರಾಜ್, ಸಲಹಾ ಸಮಿತಿಯ ನಿರ್ದೇಶಕ ಎಂ.ಎಸ್.ಕೋಟ್ಯಾನ್ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.