ಮಳೆಗಾಲ: ಕಾಸರಗೋಡು ಜಿಲ್ಲೆಯಲ್ಲಿ ಮುನ್ನೆಚ್ಚರಿಕೆ ಕ್ರಮಕ್ಕೆ ಸೂಚನೆ
ಕಾಸರಗೋಡು, ಮೇ 26: ಮಳೆಗಾಲದಲ್ಲಿ ಉಂಟಾಗುವ ಪ್ರಾಕೃತಿಕ ವಿಕೋಪಗಳನ್ನು ಎದುರಿಸಲು ಜಿಲ್ಲೆ ಸಜ್ಜಾಗಿದ್ದು, ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲು ಜಿಲ್ಲಾ ಹೆಚ್ಚುವರಿ ದಂಡಾಕಾರಿ ಪಿ.ವಿ.ಮುರಳೀಧರನ್ ಸೂಚನೆ ನೀಡಿದರು.
ಮೇ 28ರಿಂದ ಜಿಲ್ಲಾಕಾರಿ ಕಚೇರಿಯಲ್ಲಿ 24 ಗಂಟೆಯೂ ಕಾರ್ಯಾಚರಿಸುವ ಕಂಟ್ರೋಲ್ ರೂಂ ತೆರೆಯಲಾಗುವುದು. ಪೊಲೀಸ್, ಅಗ್ನಿಶಾಮಕ ದಳ, ಕಂದಾಯ ಸಿಬ್ಬಂದಿ ಸೇವೆ ಲಭ್ಯ ವಾಗಲಿದೆ. ತುರ್ತು ಸಂದರ್ಭಗಳಲ್ಲಿ ಆರೋಗ್ಯ, ಕೃಷಿ, ಜಲ ಸಂ
ನ್ಮೂಲ ಇಲಾಖೆಯ ಸೇವೆಯೂ ಲಭಿಸಲಿದೆ ಎಂದು ಸಭೆಯಲ್ಲಿ ತಿಳಿಸಲಾಯಿತು. ಪೊಲೀಸ್, ಅಗ್ನಿಶಾಮಕ ದಳ, ಕಂದಾಯ, ಸ್ಥಳೀಯಾಡಳಿತ ಸಂಸ್ಥೆ, ಆರೋಗ್ಯ, ಕೃಷಿ, ಜಲ ಸಂಪನ್ಮೂಲ, ಲೋಕೋಪಯೋಗಿ, ಅರಣ್ಯ ಇಲಾಖೆಗಳು ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕು ಎಂದು ಮುರಳೀಧರನ್ ಸೂಚಿಸಿದರು. ವಿಶೇಷ ನೋಡಲ್ ಅಕಾರಿಗಳನ್ನು ನೇಮಿಸಲು ಸಭೆ ಯಲ್ಲಿ ತೀರ್ಮಾನಿಸಲಾಯಿತು. ತೀರ ವಾಸಿಗಳ ಸುರಕ್ಷತೆ ಖಾತರಿ ಪಡಿಸಲು ಕರಾವಳಿ ಪೊಲೀಸ್ ಮತ್ತು ಮೀನುಗಾರಿಕಾ ಇಲಾಖೆ ಕ್ರಮ ತೆಗೆದುಕೊಂಡಿದೆ. ಅಗತ್ಯಬಿದ್ದಲ್ಲಿ ಆಹಾರ ಪೂರೈಕೆಗೂ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದವರು ತಿಳಿಸಿದರು.