ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ
ಬಿ.ಮೂಡ ಸರಕಾರಿ ಕಾಲೇಜಿಗೆ 88 ಶೇಕಡಾ ಫಲಿತಾಂಶ
ವಿಟ್ಲ, ಮೇ 27 : ಬಂಟ್ವಾಳ ತಾಲೂಕಿನ ಬಿ.ಸಿ.ರೋಡು ಸಮೀಪದ ಗೂಡಿನಬಳಿ ಸರಕಾರಿ ಪದವಿ ಪೂರ್ವ ಕಾಲೇಜು ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ 88 ಫಲಿತಾಂಶ ದಾಖಲಿಸಿದೆ.
ಪರೀಕ್ಷೆಗೆ ಹಾಜರಾದ 125 ಮಂದಿ ವಿದ್ಯಾರ್ಥಿಗಳ ಪೈಕಿ 110 ಮಂದಿ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಕಲಾ ವಿಭಾಗದಲ್ಲಿ ಹಾಜರಾದ ಒಟ್ಟು 53 ಮಂದಿ ವಿದ್ಯಾರ್ಥಿಗಳ ಪೈಕಿ 44 ಮಂದಿ ಉತ್ತೀರ್ಣರಾಗಿದ್ದು, ವಾಣಿಜ್ಯ ವಿಭಾಗದಲ್ಲಿ ಹಾಜರಾದ 72 ಮಂದಿ ವಿದ್ಯಾರ್ಥಿಗಳ ಪೈಕಿ 66 ಮಂದಿ ಉತ್ತೀರ್ಣರಾಗಿದ್ದಾರೆ.
ಶೃತಿ (ವಾಣಿಜ್ಯ ವಿಭಾಗ) 549 ಅಂಕ, ಫಾತಿಮತ್ ಶಾಕಿರಾ (ವಾಣಿಜ್ಯ ವಿಭಾಗ) 548 ಅಂಕ, ಪ್ರವೀಣ್ ಕುಮಾರ್ (ವಾಣಿಜ್ಯ ವಿಭಾಗ) 520 ಅಂಕ ಗಳಿಸಿ ವಿಶಿಷ್ಠ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಕಲಾ ವಿಭಾಗದಲ್ಲಿ ತೌಹೀದ್ ರಹ್ಮಾನ್ 463 ಗರಿಷ್ಟ ಅಂಕ ಗಳಿಸಿದ್ದಾರೆ ಎಂದು ಕಾಲೇಜು ಪ್ರಾಂಶುಪಾಲೆ ಕೆ. ಸರಸ್ವತಿ ಭಟ್ ತಿಳಿಸಿದ್ದಾರೆ.
ಮೊಡಂಕಾಪು ಕಾಲೇಜಿಗೆ 96 ಶೇ.
ವಿಟ್ಲ: ಬಿ.ಸಿ.ರೋಡ್ ಸಮೀಪದ ಮೊಡಂಕಾಪು ಕಾರ್ಮೆಲ್ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಗೆ ಹಾಜರಾದ ಒಟ್ಟು 288 ವಿದ್ಯಾರ್ಥಿಗಳ ಪೈಕಿ 276 ಮಂದಿ ವಿದ್ಯಾರ್ಥಿಗಳು ತೇರ್ಗಡೆಯಾಗುವ ಮೂಲಕ ಶೇ 96 ಫಲಿತಾಂಶ ದಾಖಲಿಸಿದೆ.
26 ಮಂದಿ ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿ, 211 ಮಂದಿ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಕಲಾ ವಿಭಾಗದಲ್ಲಿ ಮ್ಯಾನ್ವೆಲ್ 473, ವಾಣಿಜ್ಯ ವಿಭಾಗದಲ್ಲಿ ಫಾತಿಮತ್ ಜೋಹರಾ 558, ವಿಜ್ಞಾನ ವಿಭಾಗದಲ್ಲಿ ನಿಧೀಕ್ಷಾ 568 ಅಂಕ ಗಳಿಸಿ ಕಾಲೇಜಿನಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ ಎಂದು ಕಾಲೇಜು ಪ್ರಾಂಶುಪಾಲೆ ಭಗಿನಿ ಉಜ್ವಲ ತಿಳಿಸಿದ್ದಾರೆ.
ಶ್ರೀರಾಮ ಕಾಲೇಜಿಗೆ 96 ಶೇ.
ವಿಟ್ಲ, ಮೇ 27: ಬಂಟ್ವಾಳ ತಾಲೂಕಿನ ಕಲ್ಲಡ್ಕ ಶ್ರೀರಾಮ ಪದವಿ ಪೂರ್ವ ವಿದ್ಯಾಲಯ ಈ ಬಾರಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ. 96 ಫಲಿತಾಂಶ ದಾಖಲಿಸಿದೆ. ಸಂಸ್ಥೆಯಿಂದ ಪರೀಕ್ಷೆಗೆ ಹಾಜರಾದ ಒಟ್ಟು 338 ವಿದ್ಯಾರ್ಥಿಗಳ ಪೈಕಿ 323 ಮಂದಿ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಚೈತ್ರ 569, ವಿಜ್ಞಾನ ವಿಭಾಗದಲ್ಲಿ ಸುಜಾತ 546, ಕಲಾ ವಿಭಾಗದಲ್ಲಿ ಸುಪ್ರಿತಾ 521 ಅಂಕ ಗಳಿಸಿ ಕಾಲೇಜಿನಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ.
ವಾಣಿಜ್ಯ ವಿಭಾಗದ ಹರ್ಷಿತಾ ಲಕ್ಷ್ಮೀ 557, ಆದರ್ಶ 553, ತ್ರಿವೇಣಿ 544, ಸುದರ್ಶನ್ 543, ರಮ್ಯಶ್ರೀ 541, ಅಕ್ಷತಾ 536, ಪ್ರಜ್ಞಾ 534, ಪ್ರಮಿತ್ 532, ಸೌಮ್ಯಶ್ರೀ 531, ಕೆ.ಎಸ್. 531, ರಕ್ಷಿತ್ 530, ಹರ್ಷಿಕಾ 529, ಸಾಗರ್ 522, ಶ್ರಾವ್ಯ ಪೊಳಲಿ 521, ಚೇತನಾ 518, ಅನಿರೀಕ್ಷಿತಾ 516, ಯಶ್ಮಿತಾ ಹರ್ಷಿತಾ 513, ವಿಜ್ಞಾನ ವಿಭಾಗದ ಸತ್ಯಶ್ಯಾಮ 533, ಪ್ರಶಾಂತ ಕೆ.ವಿ 519, ವೀರೇಶ್ ಕುಮಾರ್ 518, ಕೃಷ್ಣಪ್ರಿಯ 518, ಅಸ್ಮಿತಾ ರೈ.ಬಿ. 515 ಹೀಗೆ ಒಟ್ಟು 25 ಮಂದಿ 85% ಕ್ಕಿಂತ ಅಧಿಕ, 230 ಮಂದಿ ಪ್ರಥಮ ಶ್ರೇಣಿ, 48 ಮಂದಿ ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ಕಾಲೇಜು ಸಂಚಾಲಕ ಡಾ. ಕೆ. ಪ್ರಭಾಕರ ಭಟ್ ಕಲ್ಲಡ್ಕ ತಿಳಿಸಿದ್ದಾರೆ.