ಜಾಲ್ಸೂರು: ಪೈಪ್ ತೆಗೆಯಲು ಕೆರೆಗಿಳಿದ ಬಾಲಕ ಮೃತ್ಯು
Update: 2016-05-27 17:19 IST
ಕಾಸರಗೋಡು, ಮೇ 27: ಕೆರೆಗೆ ಬಿದ್ದಿದ್ದ ಪೈಪ್‌ನ್ನು ತೆಗೆಯಲು ಕೆರೆಗಿಳಿದ ಬಾಲಕನೋರ್ವ ನೀರಿನಲ್ಲಿ ಮುಳುಗಿ ಮೃತಪಟ್ಟ ದಾರುಣ ಘಟನೆ ಜಾಲ್ಸೂರಿನಲ್ಲಿ ನಡೆದಿದೆ.
ಬೆಳ್ಳೂರು ಬಳಿಯ ಕುಳದಪಾರೆಯ ನಿವಾಸಿ ಜೀವೋ ಬೆನ್ನಿ (16) ಮೃತಪಟ್ಟ ಬಾಲಕ. ಮಂಞಂಪಾರೆ ಮಜ್ಲಿಸ್ ಶಾಲೆಯ ಸಿಬಿಎಇ ಹತ್ತನೆ ತರಗತಿ ವಿದ್ಯಾರ್ಥಿಯಾಗಿದ್ದ ಜೀವೋ ಬೆನ್ನಿ ಜಾಲ್ಸೂರಿನಲ್ಲಿರುವ ಅಜ್ಜಿ ಮನೆಗೆ ತೆರಳಿದ್ದನು. ಅಲ್ಲಿನ ಹಿತ್ತಿಲಿನಲ್ಲಿರುವ ಕೆರೆಯೊಂದಕ್ಕೆ ಬಿದ್ದ ಪೈಪನ್ನು ಹೆಕ್ಕಲೆಂದು ಈತ ಇಳಿದಿದ್ದನೆನ್ನಲಾಗಿದೆ.
ಈ ವೇಳೆ ಕಾಲುಜಾರಿ ಕೆರೆಗೆ ಬಿದ್ದ ಜೀವೋ ಬೆನ್ನಿಯ ತಲೆಗೆ ಕಲ್ಲು ತಾಗಿ ಗಂಭೀರ ಗಾಯಗೊಂಡಿದ್ದ. ಸುಳ್ಯದ ಆಸ್ಪತ್ರೆಗೆ ಕೊಂಡೊಯ್ಯುತ್ತಿದ್ದಂತೆ ಆತ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.