×
Ad

ಟೋಕಿಯೊ: ವಿಮಾನಕ್ಕೆ ಬೆಂಕಿ; ಪ್ರಯಾಣಿಕರು ಪಾರು

Update: 2016-05-27 19:47 IST

ಟೋಕಿಯೊ, ಮೇ 27: ಟೋಕಿಯೊದ ಹನೇಡ ವಿಮಾನ ನಿಲ್ದಾಣದಲ್ಲಿ ಕೊರಿಯನ್ ಏರ್ ಬೋಯಿಂಗ್ 777 ವಿಮಾನದ ಇಂಜಿನೊಂದಕ್ಕೆ ಬೆಂಕಿ ಹೊತ್ತಿಕೊಂಡಾಗ ವಿಮಾನದಿಂದ ಸುಮಾರು 300 ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ರಕ್ಷಿಸಲಾಯಿತು ಎಂದು ಅಧಿಕಾರಿಗಳು ಶುಕ್ರವಾರ ಹೇಳಿದರು.

ವಿಮಾನವು ದಕ್ಷಿಣ ಕೊರಿಯದ ಗಿಂಪೊ ಇಂಟರ್‌ನ್ಯಾಶನಲ್ ವಿಮಾನ ನಿಲ್ದಾಣಕ್ಕೆ ಹಾರಲು ಸಿದ್ಧವಾಗಿತ್ತು. ‘‘ಹನೇಡದಿಂದ ಗಿಂಪೊ ವಿಮಾನ ನಿಲ್ದಾಣಕ್ಕೆ ಹೊರಟಿದ್ದ ವಿಮಾನದಲ್ಲಿ 302 ಪ್ರಯಾಣಿಕರು ಮತ್ತು 17 ಸಿಬ್ಬಂದಿಯಿದ್ದರು. ವಿಮಾನದ ಒಂದನೆ ಇಂಜಿನ್‌ನಲ್ಲಿ ಬೆಂಕಿ ಹಿಡಿಯಿತು’’ ಎಂದು ಕೊರಿಯನ್ ಏರ್ ವಕ್ತಾರರೊಬ್ಬರು ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News