×
Ad

ಅಟ್ಲಾಂಟಿಕ್ ಸಾಗರದ ಅಡ್ಡಕ್ಕೆ ಕೇಬಲ್ ಹಾಕಲಿರುವ ಮೈಕ್ರೊಸಾಫ್ಟ್, ಫೇಸ್‌ಬುಕ್

Update: 2016-05-27 20:46 IST

ವಾಶಿಂಗ್ಟನ್, ಮೇ 27: ಇಂಟರ್‌ನೆಟ್‌ನ ವೇಗ ಮತ್ತು ವ್ಯಾಪ್ತಿಯನ್ನು ಹೆಚ್ಚಿಸುವುದಕ್ಕಾಗಿ ಅಟ್ಲಾಂಟಿಕ್ ಸಾಗರದ ಅಡ್ಡಕ್ಕೆ ಅತ್ಯಾಧುನಿಕ ಸಾಗರದಾಳದ ಕೇಬಲ್ ಎಳೆಯಲು ಮೈಕ್ರೋಸಾಫ್ಟ್ ಮತ್ತು ಫೇಸ್‌ಬುಕ್‌ಗಳು ಕೈಜೋಡಿಸಿವೆ. ಈ ಕೇಬಲ್ ವ್ಯವಸ್ಥೆಯು ಅಮೆರಿಕವನ್ನು ಯುರೋಪ್ ಮತ್ತು ಇತರ ಭಾಗಗಳೊಂದಿಗೆ ಸಂಪರ್ಕಿಸಲಿವೆ.
ಮೈಕ್ರೋಸಾಫ್ಟ್, ಫೇಸ್‌ಬುಕ್ ಮತ್ತು ಅವುಗಳ ಗ್ರಾಹಕರ ಕ್ಲೌಡ್ ಮತ್ತು ಆನ್‌ಲೈನ್ ಸೇವೆಗಳಿಗಾಗಿ ಅತ್ಯಂತ ವೇಗದ ಹಾಗೂ ವಿಶ್ವಾಸಾರ್ಹ ಸಂಪರ್ಕಕ್ಕಾಗಿನ ಹೆಚ್ಚುತ್ತಿರುವ ಬೇಡಿಕೆಯನ್ನು ಈ ಹೊಸ ‘‘ಎಂಎಆರ್‌ಇಎ’’ ಕೇಬಲ್ ಪೂರೈಸಲಿದೆ ಎಂದು ಮಾಧ್ಯಮ ಪ್ರಕಟನೆಯೊಂದು ತಿಳಿಸಿದೆ.
ಕೇಬಲ್ ಹಾಕುವ ಕಾರ್ಯ 2016 ಆಗಸ್ಟ್‌ನಲ್ಲಿ ಆರಂಭಗೊಂಡು 2017 ಅಕ್ಟೋಬರ್‌ನಲ್ಲಿ ಮುಕ್ತಾಯಗೊಳ್ಳುವ ನಿರೀಕ್ಷೆಯಿದೆ ಎಂದು ಅದು ತಿಳಿಸಿದೆ.
6,600 ಕಿಲೋಮೀಟರ್ ಉದ್ದದ ಸಾಗರದಾಳದ ಕೇಬಲ್ ವ್ಯವಸ್ಥೆಯನ್ನು ಟೆಲ್‌ಕ್ಸಿಯಸ್ ನಿರ್ವಹಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News