ಜಂಬೋ ಸರ್ಕಸ್‌ನಲ್ಲಿ ವಿಶ್ವ ನಗುವ ದಿನಾಚರಣೆ
ಉಡುಪಿ, ಮೇ 27: ನಗರದ ಕಲ್ಸಂಕದ ಬಳಿ ಇರುವ ರಾಯಲ್ ಗಾರ್ಡನ್ಸ್‌ನಲ್ಲಿ ಆಫ್ರಿಕನ್ ಹಾಗೂ ಮಣಿಪುರದ ಸರ್ಕಸ್ ಕಲಾವಿದರೊಂದಿಗೆ ಪ್ರದರ್ಶನ ನೀಡುತ್ತಿರುವ ಜಂಬೋ ಸರ್ಕಸ್‌ನಲ್ಲಿ ಇಂದು ವಿಶ್ವ ನಗುವ ದಿನವನ್ನು ಆಚರಿಸಲಾಯಿತು.
ಜಂಬೋ ಸರ್ಕಸ್‌ನ ಪ್ರಮುಖ ಆಕರ್ಷಣೆಯಾಗಿರುವ ಕೇವಲ 2.5 ಅಡಿ ಎತ್ತರದ ಬಿಹಾರದ ಗಯಾ ಜಿಲ್ಲೆಯ ಸರ್ಕಸ್ ಕಲಾವಿದ ಸಂಜಯ್ ನೇತೃತ್ವದಲ್ಲಿ ಈ ಆಚರಣೆ ನಡೆಯಿತು. ಕುಳ್ಳಗಿನ ಹಾಸ್ಯ ಕಲಾವಿದರಾದ ಅಂಜಯ್, ಎಝುಮಲೈ, ವಿಶ್ವನ್, ಭೂಪಿಂದರ್ ಅಲ್ಲದೇ ಆಫ್ರಿಕದ ಕಲಾ ವಿದರಾದ ಅಂತೋನಿ ಮ್ಯಾಕ್ಸ್‌ಮಿಲನ್, ಚಿಂಬಿ ಇದರಲ್ಲಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಸಂಜಯ್ ಅವರು ಕೇಕ್ ಕತ್ತರಿಸಿದರು. ಸರ್ಕಸ್ ಕಂಪೆನಿಯ ಎಲ್ಲಾ ಕಲಾವಿದರು ವಿಶ್ವ ನಗುವ ದಿನಾಚರಣೆಯಲ್ಲಿ ಭಾಗವಹಿಸಿ ಮನಸಾರೆ ನಕ್ಕುಬಿಟ್ಟರು. ಮೇ ಆರಂಭದಿಂದ ಇಲ್ಲಿ ಪ್ರದರ್ಶನ ನೀಡುತ್ತಿರುವ ಜಂಬೋ ಸರ್ಕಸ್, ಮೈನವಿರೇಳಿಸುವ ಕಸರತ್ತುಗಳು ಮೂಲಕ ಉಡುಪಿ ಜಿಲ್ಲೆಯ ಕಲಾಪ್ರೇಮಿಗಳ ಆಕರ್ಷಿಸಿದೆ. ಜೂ.12ರವರೆಗೆ ನಮ್ಮ ಪ್ರದರ್ಶನ ಮುಂದುವರಿಯಲಿದ್ದು, ಈಗಿನ ವಿವಿಧ ಪ್ರದರ್ಶನದೊಂದಿಗೆ ಹೊಸದಾಗಿ ಎರಡು ಸೀರೆಗಳ ಕಸರತ್ತು, ಹಣೆಯ ಮೇಲೆ ಬಿದಿರಿನ ಕಸರತ್ತು, ಲಿಂಪಿಂಗ್ ಬೋರ್ಡ್, ಸ್ಕೇಟಿಂಗ್ ಆ್ಯಕಟ್ ಹಾಗೂ ಸ್ಟೈಡರ್‌ಮ್ಯಾನ್ ಆ್ಯಕ್ಟ್‌ಗಳನ್ನು ಹೊಸದಾಗಿ ಪ್ರದರ್ಶಿಸುವುದಾಗಿ ಕಂಪೆನಿಯ ಪ್ರಮೋಟರ್ ಕೆ.ಎಂ.ಸಚೀಂದ್ರನಾಥ್ ಹಾಗೂ ಮಾಧ್ಯಮ ಸಂಯೋಜಕ ಶ್ರೀಹರಿ ನಾಯರ್ ತಿಳಿಸಿದರು.