×
Ad

ರಂಗಪಯಣ ತಂಡದಿಂದ 'ಚಂದ್ರಗಿರಿಯ ತೀರದಲ್ಲಿ' ನಾಟಕ ಪ್ರದರ್ಶನ

Update: 2016-05-27 21:46 IST

ಮಂಗಳೂರು, ಮೇ 27: ಡಿವೈಎಫ್‌ಐ ಜಿಲ್ಲಾ ಸಮಿತಿಯ ಆಶ್ರಯದಲ್ಲಿ ನಗರದ ಪುರಭವನದಲ್ಲಿ ರಂಗಪಯಣ ತಂಡದಿಂದ ಡಾ.ಸಾರಾ ಅಬೂಬಕರ್‌ರ ಕಾದಂಬರಿ ಆಧಾರಿತ ಚಂದ್ರಗಿರಿಯ ತೀರದಲ್ಲಿ ನಾಟಕ ಪ್ರದರ್ಶನವು ನಯನ ಜೆ. ಸೂಡಾ ನಿರ್ದೇಶನದಲ್ಲಿ ಶುಕ್ರವಾರ ಪ್ರದರ್ಶನಗೊಂಡಿತು.

ನಾಟಕದ ಉದ್ಘಾಟನಾ ಸಮಾರಂಭದಲ್ಲಿ ಮನಪಾ ಸದಸ್ಯ ದಯಾನಂದ ಶೆಟ್ಟಿ, ವಿಚಾರವಾದಿಗಳ ಸಂಘದ ರಾಷ್ಟ್ರೀಯ ಅಧ್ಯಕ್ಷ ಪ್ರೊ.ನರೇಂದ್ರನಾಯಕ್, ಬದ್ರಿಯ ಕಾಲೇಜಿನ ಪ್ರಾಂಶುಪಾಲ ಇಸ್ಮಾಯೀಲ್, ಸತ್ಯನಾರಾಯಣ ಮಲ್ಲಿಪಟ್ಣ ,ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಮೊದಲಾದವರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಡಾ.ಸಾರಾ ಅಬೂಬಕರನ್ನು ರಂಗ ತಂಡದ ಸದಸ್ಯರು ಗೌರವಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News