ಮರಳು ಮಾಫಿಯಾದೊಂದಿಗೆ ಶಾಮೀಲು ಆರೋಪ: ಉಡುಪಿ ಜಿಲ್ಲಾಧಿಕಾರಿ ವಿರುದ್ಧ ದಸಂಸ ಧರಣಿ

Update: 2016-05-27 18:10 GMT

ಉಡುಪಿ, ಮೇ 27: ಮರಳು ಮಾಫಿಯಾದೊಂದಿಗೆ ಉಡುಪಿ ಜಿಲ್ಲಾಧಿಕಾರಿ ಡಾ.ಆರ್.ವಿಶಾಲ್ ಶಾಮೀಲಾಗಿರುವುದಾಗಿ ಆರೋ ಪಿಸಿ ಹಾಗೂ ಪ್ರವಾಸೋದ್ಯಮ ಕ್ಷೇತ್ರದಲ್ಲಿ ನಡೆಸಿರುವ ಅವ್ಯವಹಾರ ವನ್ನು ಸಿಐಡಿ ತನಿಖೆಗೆ ಒಪ್ಪಿಸುವಂತೆ ಆಗ್ರಹಿಸಿ ಉಡುಪಿ ಜಿಲ್ಲಾ ಕರ್ನಾಟಕ ದಲಿತ ಸಂಘರ್ಷ ಸಮಿತಿಗಳ ಮಹಾಒಕ್ಕೂಟ ಉಡುಪಿ ಸರ್ವಿಸ್ ಬಸ್ ನಿಲ್ದಾಣದ ಕ್ಲಾಕ್ ಟವರ್ ಎದುರು ಧರಣಿ ನಡೆಸಿತು.

ಉಡುಪಿ ತಾಪಂ ಕಚೇರಿಯ ಎದುರಿನಿಂದ ಕ್ಲಾಕ್ ಟವರ್‌ವರೆಗೆ ಮೆರವಣಿಗೆ ನಡೆಸಲಾಯಿತು. ಬಳಿಕ ನಡೆದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ದಸಂಸ(ಭೀಮವಾದ) ರಾಜ್ಯ ಸಮಿತಿ ಸದಸ್ಯ ಉದಯ ಕುಮಾರ್ ತಲ್ಲೂರು, ಜಿಲ್ಲಾಧಿಕಾರಿ ಮರಳು ಮಾಫಿಯಾದೊಂದಿಗೆ ಸೇರಿ ಸಿಆರ್‌ಝೆಡ್‌ನಲ್ಲಿ ಮರಳು ಹಂಚಿಕೆಯನ್ನು ಸರಕಾರದ ಗಮನಕ್ಕೆ ತಾರದೆ ಕಾನೂನು ಬಾಹಿರವಾಗಿ ಖಾಸಗೀಕರಣಗೊಳಿಸಿದ್ದಾರೆ. ಪ್ರವಾಸೋದ್ಯಮದ ಹೆಸರಿನಲ್ಲಿ ಬೀಚ್ ನಿರ್ವಹಣೆಯನ್ನು ಖಾಸಗೀ ಕರಣಗೊಳಿಸಿ ಕೋಟ್ಯಂತರ ರೂ. ಅವ್ಯವಹಾರ ಮಾಡಲಾಗಿದೆ ಎಂದು ಆರೋಪಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಯ ಪ್ರತಿಕೃತಿಯನ್ನು ದಹಿಸ ಲಾಯಿತು. ಧರಣಿಯಲ್ಲಿ ದಸಂಸ(ಪ್ರೊ.ಕೃಷ್ಣಪ್ಪ ಸ್ಥಾಪಿತ) ರಾಜ್ಯ ಸಂಘಟನಾ ಸಂಚಾಲಕ ಶೇಖರ್ ಹೆಜ್ಮಾಡಿ, ಜಿಲ್ಲಾ ಸಂಚಾಲಕ ರಮೇಶ್ ಕೆಳಾರ್ಕಳಬೆಟ್ಟು, ಸಮತಾ ಸೈನಿಕ ದಳದ ಜಿಲ್ಲಾಧ್ಯಕ್ಷ ವಿಶ್ವನಾಥ ಪೇತ್ರಿ, ಚಂದ್ರ ಅಲ್ತಾರು, ಪ್ರಶಾಂತ್ ತೊಟ್ಟಂ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News