ಮಳೆಗಾಲ: ಇಂದು ಪೂರ್ವಸಿದ್ಧತಾ ಸಭೆ
Update: 2016-05-27 23:44 IST
ಕಾಸರಗೋಡು, ಮೇ 27: ಮಳೆಗಾಲ ದುರಂತ ತಡೆಗಟ್ಟಲು ಹಾಗೂ ಜೀವಹಾನಿ ಸಂಭವಿಸದಂತೆ ಕ್ರಮ ತೆಗೆದುಕೊಳ್ಳುವ ನಿಟ್ಟಿನಲ್ಲಿ ಜಿಲ್ಲಾಡಳಿತ ಕೈಗೊಳ್ಳುವ ಪೂರ್ವ ಸಿದ್ಧತೆ ಕುರಿತ ಅವಲೋಕನಾ ಸಭೆ ಮೇ 28ರಂದು ಮಧ್ಯಾಹ್ನ 12ಕ್ಕೆ ಕಾಸರಗೋಡು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕಂದಾಯ ಸಚಿವ ಇ.ಚಂದ್ರಶೇಖರನ್ ಅಧ್ಯಕ್ಷತೆಯಲ್ಲಿ ನಡೆಯಲಿದೆ ಎಂದು ಜಿಲ್ಲಾಧಿಕಾರಿಯ ಪ್ರಕಟನೆ ತಿಳಿಸಿದೆ.