ಕಲ್ಲಾಪು ನಿವಾಸಿ ಅಬ್ದುಲ್ಲಾ ಉಸ್ಮಾನ್ ನಿಧನ
Update: 2016-05-28 14:27 IST
ಮಂಗಳೂರು, ಮೇ 28: ಕಲ್ಲಾಪು ಪಟ್ಲ ನಿವಾಸಿ ಅಬ್ದುಲ್ಲಾ ಉಸ್ಮಾನ್ (58) ಅಲ್ಪ ಕಾಲದ ಅಸೌಖ್ಯದಿಂದ ಮಂಗಳೂರು ನಗರದ ಖಾಸಗಿ ಆಸ್ಪತ್ರೆಯಲ್ಲಿ ಇಂದು ಬೆಳಗ್ಗೆ ಮೃತಪಟ್ಟರು.
ಮೃತರು ಪತ್ನಿ, ಮೂವರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.
ಮೃತರು ಇತ್ತೀಚೆಗೆ ಪಟ್ಲದಲ್ಲಿ ದುಷ್ಕರ್ಮಿಗಳಿಂದ ಚೂರಿ ಇರಿತಕ್ಕೆ ಒಳಗಾಗಿ ಗಂಭೀರವಾಗಿ ಗಾಯಗೊಂಡು, ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಫ್ವಾನ್ ಹಸನ್ ಎಂಬವರ ತಂದೆ.
ಪುತ್ರ ಚೂರಿ ಇರಿತಕ್ಕೆ ಒಳಗಾಗಿ ಗಂಭೀರ ಗಾಯಗೊಂಡಿದ್ದರಿಂದ ಅಬ್ದುಲ್ಲಾ ಉಸ್ಮಾನ್ ಮಾನಸಿಕವಾಗಿ ಕಂಗೆಟ್ಟಿದ್ದರು. ಇದರಿಂದ ಅವರ ಆರೋಗ್ಯದಲ್ಲಿ ಏರು ಪೇರಾಯಿತು. ಈಗ ಅನಾರೋಗ್ಯ ತೀವ್ರ ಗೊಂಡು ಮೃತಪಟ್ಟಿದ್ದಾರೆ ಎಂದು ಕುಟುಂಬದ ಸದಸ್ಯರು 'ವಾರ್ತಾ ಭಾರತಿ'ಗೆ ತಿಳಿಸಿದ್ದಾರೆ.