ದಾರುಲ್ ಅಶ್-ಅರಿಯ್ಯ ಅಜ್ಮಾನ್ ಸಮಿತಿ ವತಿಯಿಂದ ಅಜ್ಮೀರ್ ಮೌಲಿದ್
ವಿಟ್ಲ, ಮೇ 28: ಸುರಿಬೈಲು ದಾರುಲ್ ಅಶ್-ಅರಿಯ್ಯ ಎಜ್ಯುಕೇಶನ್ ಸೆಂಟರ್ ಇದರ ಯುಎಇ-ಅಜ್ಮಾನ್ ಸಮಿತಿ ವತಿಯಿಂದ ವಾರ್ಷಿಕ ಸ್ವಲಾತ್ ಹಾಗೂ ಅಜ್ಮೀರ್ ಮೌಲಿದ್ ಕಾರ್ಯಕ್ರಮವು ಇತ್ತೀಚೆಗೆ ನಡೆಯಿತು.
ದಾರುಲ್ ಅಶ್-ಅರಿಯ್ಯ ಅಧ್ಯಕ್ಷ ಶೈಖುನಾ ವಾಲೆಮುಂಡೋವು ಉಸ್ತಾದ್ ದುಆ ಮಾಡಿದರು. ಜನರಲ್ ಮ್ಯಾನೇಜರ್ ಮುಹಮ್ಮದಾಲಿ ಸಖಾಫಿ ಮುಖ್ಯ ಭಾಷಣಗೈದರು. ಮುಖ್ಯ ಅತಿಥಿಗಳಾಗಿ ಅಜ್ಮಾನ್ ಕೆಸಿಎಫ್ ಪ್ರಮುಖರಾದ ಅಬೂಬಕರ್ ಮದನಿ, ಅಬ್ದುಲ್ ಖಾದರ್ ಸಅದಿ, ಸಿದ್ದೀಕ್ ಅಮಾನಿ, ಅಶ್-ಅರಿಯ್ಯದ ಅಬ್ದುಲ್ ರಶೀದ್ ಹನೀಫಿ ಉಪ್ಪಳ ಭಾಗವಹಿಸಿದ್ದರು.
ನೂತನ ಪದಾದಿಕಾರಿಗಳ ಆಯ್ಕೆ
ಅಶ್-ಅರಿಯ್ಯ ಅಜ್ಮಾನ್ ಕಮಿಟಿಯ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ಗೌರವಾಧ್ಯಕ್ಷರಾಗಿ ಅಬ್ದುಲ್ ಖಾದರ್ ಸಅದಿ ಹಾಗೂ ಅಬೂಬಕರ್ ಮದನಿ, ಅಧ್ಯಕ್ಷರಾಗಿ ಅಬ್ಬಾಸ್ ಬೊಳ್ಳಾಯಿ, ಉಪಾಧ್ಯಕ್ಷರುಗಳಾಗಿ ಸಿದ್ದೀಕ್ ಅಮಾನಿ, ಹಕೀಂ ವಳಾಲ್, ಹಮೀದ್ ಸುರಿಬೈಲು, ಕಾರ್ಯದರ್ಶಿಗಳಾಗಿ ಅಶ್ಫಾಕ್ ಕೆದಿಲ, ಜುನೈದ್ ಬಿ.ಕೆ. ಸಂಪ್ಯ-ಪುತ್ತೂರು ಹಾಗೂ ಅಶ್ರಫ್ ಕುಕ್ಕಾಜೆ, ಕೋಶಾಧಿಕಾರಿಯಾಗಿ ಲತೀಫ್ ತಿಂಗಳಾಡಿ ಅವರನ್ನು ಆಯ್ಕೆ ಮಾಡಲಾಯಿತು.