×
Ad

ಮಂಜೇಶ್ವರ, ವೆಳ್ಳರಿಕುಂಡು ತಾಲೂಕು ಕೇಂದ್ರಗಳಿಗೆ ಮಿನಿ ಸಿವಿಲ್ ಸ್ಟೇಶನ್: ಸಚಿವ ಚಂದ್ರಶೇಖರನ್

Update: 2016-05-28 15:15 IST

ಕಾಸರಗೋಡು, ಮೇ 28 : ಎರಡು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದ  ಮಂಜೇಶ್ವರ ಮತ್ತು ವೆಳ್ಳರಿಕುಂಡು ತಾಲೂಕು ಕೇಂದ್ರಗಳಿಗೆ ಮಿನಿ ಸಿವಿಲ್ ಸ್ಟೇಶನ್   ನಿರ್ಮಿಸಲಾಗುವುದು ಎಂದು ಕೇರಳ ನೂತನ ಕಂದಾಯ ಸಚಿವ  ಚಂದ್ರಶೇಖರನ್ ತಿಳಿಸಿದ್ದಾರೆ.

ಅವರು ಶನಿವಾರ  ಕಾಸರಗೋಡು ಪ್ರೆಸ್ ಕ್ಲಬ್ ನಲ್ಲಿ  ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.

ನೂತನ ತಾಲೂಕು ಗಳಿಗೆ ಸ್ವಂತ ಕಟ್ಟಡ ನಿರ್ಮಿಸುವ ಯೋಜನೆ ಸರಕಾರದ ಬಳಿ ಇದೆ.  ಎಂಡೋಸಲ್ಫಾನ್ ಸಂತ್ರಸ್ತರ ಪುನರ್ ವಸತಿಗೆ  ರಾಜ್ಯ ಸರಕಾರ ಎಲ್ಲಾ ರೀತಿಯ ಗಮನ ನೀಡಲಾಗುವುದು ಎಂದು ಹೇಳಿದರು. 

ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಮೊದಲ  ಬಾರಿ  ಕಾಸರಗೋಡಿಗೆ ಆಗಮಿಸಿದ ಸಚಿವರನ್ನು ಕಾಞಂ ಗಾಡ್  ರೈಲ್ವೆ ನಿಲ್ದಾಣದಲ್ಲಿ  ಪಕ್ಷದ ಕಾರ್ಯಕರ್ತರು ಬರಮಾಡಿಕೊಂಡರು.

ಶಾಸಕ ಕೆ . ಕುಂಞಿರಾಮನ್,  ಎಡರಂಗ ಜಿಲ್ಲಾ ಸಂಚಾಲಕ ಪಿ. ರಾಘವನ್ ,  ಗೋವಿಂದನ್ ಪಳ್ಳಿ ಕಾಪಿಲ್, ವಿ . ವಿ ರಮೇಶನ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News