ಬಂಟ್ವಾಳ: ನೂತನ ಆಟೋ ರಿಕ್ಷಾ ನಿಲ್ದಾಣ ಉದ್ಘಾಟನೆ
Update: 2016-05-28 16:06 IST
ಬಂಟ್ವಾಳ,ಮೇ 28: ತಾಲೂಕಿನ ರಾಷ್ಟ್ರೀಯ ಹೆದ್ದಾರಿ 75ರ ಪಕ್ಕದಲ್ಲಿರುವ ನರಿಕೊಂಬು ಗ್ರಾಮದ ಕಲ್ಲುರ್ಟಿ ದೈವಸ್ಥಾನದ ಬಳಿ ಬಂಟ್ವಾಳ ಟ್ರಾಫಿಕ್ ಎಸ್ಸೈ ಚಂದ್ರಶೇಖರಯ್ಯ ಅವರ ಮುತುವರ್ಜಿಯಲ್ಲಿ ನಿರ್ಮಿಸಲಾದ ನೂತನ ಆಟೋ ರಿಕ್ಷಾ ನಿಲ್ದಾಣವನ್ನು ಶನಿವಾರ ವೃತ್ತ ನಿರೀಕ್ಷಕ ಬೆಳ್ಳಿಯಪ್ಪ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಟ್ರಾಫಿಕ್ ಎಸ್ಸೈ ಚಂದ್ರಶೇಕರಯ್ಯ, ನರಿಕೊಂಬು ಗ್ರಾಪಂ ಅಧ್ಯಕ್ಷ ಯಶೋಧರ, ತಾಪಂ ಸದಸ್ಯೆ ಗಾಯತ್ರಿ ರವೀಂದ್ರ ಸಾಪಲ್ಯ, ರಿಕ್ಷಾ ಚಾಲಕ ಮಾಲಕ ಸಂಘದ ಅಧ್ಯಕ್ಷ ಪ್ರಭಾಕರ್ ಬಂಗೇರ, ಮಾಜಿ ಗ್ರಾಪಂ ಸದಸ್ಯ ರವೀಂದ್ರ ಸಾಪಲ್ಯ, ಗ್ರಾಪಂ ಸದಸ್ಯರಾದ ವಿಶ್ವನಾಥ ಪೂಜಾರಿ, ಮಾದವ ಕರ್ಬೆಟ್ಟು, ನವೀನ ಪ್ರರ್ತೆಟ್ಟು ಬೈಲ್, ರಂಜಿತ್ ಗದ್ದೆಲು, ಕಿಶೋರ್ ಶೆಟ್ಟಿ, ದಿವಕರ ಶಂಭೂರು, ವಸಂತ ಭೀಮಗದ್ದೆ, ಕೆಡಿಪಿ ಸದಸ್ಯ ಉಮೇಶ್ ಬೋಳಂತ್ತೂರು, ಟ್ರಾಫಿಕ್ ಠಾಣೆ ಸಿಬಂದಿ ಕೃಷ್ಣನಾಯ್ಕಾ ಮೊದಲಾದವರು ಉಪಸ್ಥಿತರಿದ್ದರು.