×
Ad

ಕಣ್ಣೂರು: ಒಂದೇ ಕುಟುಂಬದ 5 ಮಕ್ಕಳು ನದಿಯಲ್ಲಿ ಮುಳುಗಿ ಮೃತ್ಯು! ಒಬ್ಬ ಇನ್ನೂ ನಾಪತ್ತೆ!

Update: 2016-05-28 18:40 IST

ಕಾಸರಗೋಡು ಮೇ 28:ಸ್ನಾನಕ್ಕಿಳಿದ ಐವರು ವಿದ್ಯಾರ್ಥಿಗಳು ಮ್ರತಪಟ್ಟ ಘಟನೆ ಶನಿವಾರ ಸಂಜೆ ಕಣ್ಣೂರಿನ ಪಯ್ಯವೂರಿನಲ್ಲಿ ನಡೆದಿದೆ.

ಪಯ್ಯವೂರು ತಿರೂರಿನ  ಒರಿಜಾ (13), ಮಾಣಿಕ್ (13), ಆಯಲ್ ( 7) ಸಬಾನ್ ( 7) ಅಖಿಲ್ ( 5)  ಮ್ರತಪಟ್ಟವರು.  ಪಯ್ಯವೂರು ಹೊಳೆಗೆ ಸ್ನಾನಕ್ಕಿಳಿದ ಸಂದರ್ಭದಲ್ಲಿ  ಘಟನೆ ನಡೆದಿದೆ.

ಆರು ಮಂದಿ ಸ್ನಾನಕ್ಕಿಳಿದಿದಿದ್ದು, ಓರ್ವನನ್ನು ರಕ್ಷಿಸಲಾಗಿದೆ . ಓರ್ವ ವಿದ್ಯಾರ್ಥಿ ನೀರಿನಲ್ಲಿ ಮುಳುಗಿದ ಸಂದರ್ಭದಲ್ಲಿ  ರಕ್ಷಿಸಲೆತ್ನಿಸಿದ ಉಳಿದ ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ಈ ಘಟನೆ ನಡೆದಿದೆ.

ಮ್ರತಪಟ್ಟವರು ಒಂದೇ ಕುಟುಂಬದವರು ಎನ್ನಲಾಗಿದೆ.  ಸಂಜೆ ನಾಲ್ಕು ಗಂಟೆ ಸುಮಾರಿಗೆ ಘಟನೆ ನದೆದಿದೆ. ಬೊಬ್ಬೆ ಕೇಳಿ ಸ್ಥಳೀಯರು ದಾವಿಸಿ  ಬಂದು ಐವರನ್ನು ಮೇಲಕ್ಕೆತ್ತಿ ಆಸ್ಪತ್ರೆಗೆ ತಲುಪಿಸಿದರೂ ಜೀವ ಉಳಿಸಲಾಗಲಿಲ್ಲ . ಮೃತದೇಹಗಳನ್ನು ಪರಿಯಾರಂ ವೈದ್ಯಕೀಯ ಆಸ್ಪತ್ರೆ ಶವಾಗಾರದಲ್ಲಿರಿಸಲಾಗಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಷ್ಟೇ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News