ಬೆಸಿಲಿಕಾ ಮನ್ನಣೆಗೆ ಮೊಯ್ಲಿ ಪ್ರಶಂಸೆ ಅತ್ತೂರು ಚರ್ಚ್‌ಗೆ ಭೇಟಿ ನೀಡಿ ಶ್ಲಾಘನೆ
ಕಾರ್ಕಳ : ದಕ್ಷಿಣ ಭಾರತದ ಪ್ರಸಿದ್ದ ಚರ್ಚ್‌ಗಳಲ್ಲೊಂದಾದ ಅತ್ತೂರು ಸಂತಲಾರೆನ್ಸರ ಪುಣ್ಯಕ್ಷೇತ್ರಕ್ಕೆ ಬೆಸಿಲಿಕಾ ವಿಶ್ವಮನ್ನಣೆ ದೊರೆತಿರುವುದು ಸಮರ್ಥನೀಯ ಎಂದು ಮಾಜಿ ಮುಖ್ಯ ಮಂತ್ರಿ ಹಾಗೂ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಂಸದ ಡಾ.ಎಂ.ವೀರಪ್ಪ ಮೊಯ್ಲಿ ಹೇಳಿದ್ದಾರೆ.
ಅವರು ಅತ್ತೂರು ಚರ್ಚ್‌ಗೆ ಶನಿವಾರ ಭೇಟಿ ಮಾಡಿ, ಚರ್ಚ್‌ನ ಕೀರ್ತಿ ವಿಶ್ವಮಟ್ಟದಲ್ಲಿ ಪಸರಿಸಿರುವ ಕುರಿತು ಶ್ಲಾಘನೆ ವ್ಯಕ್ತಪಡಿಸಿದರು. ಬಳಿಕ ಸಂತಲಾರೆನ್ಸರಿಗೆ ಮೊಂಬತ್ತಿ ಉರಿಸಿ ಸೇವೆ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ಮಾಲತಿ ಮೊಯ್ಲಿ, ಮಾಜಿ ಶಾಸಕ ಎಚ್. ಗೋಪಾಲ ಭಂಡಾರಿ, ಉಡುಪಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಅವೆಲಿನ್ ಆರ್ ಲೂಯಿಸ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧಾಕರ್ ಕೋಟ್ಯಾನ್, ಚರ್ಚ್‌ನ ನಿರ್ದೇಶಕ ಬೋರ್ಜ್ ಡಿಸೋಜಾ, ಸಿಸ್ಟರ್ ಅನ್ವಿ, ಅಸಿಸ್ಟೇಂಟ್ ಫಾದರ್ ವಿಜಯ್, ಚರ್ಚ್‌ನ ಪಾಲನಾ ಮಂಡಳಿ ಉಪಾಧ್ಯಕ್ಷ ರಿಚರ್ಡ್ ಪಿಂಟೋ, ಸದಸ್ಯ ವಲೇರಿಯನ್ ಪಾಯಸ್, ಜೋರ್ಜ್ ಕ್ಯಾಸ್ತಲಿನೋ ನಕ್ರೆ ಮತ್ತಿತರರು ಉಪಸ್ಥಿತರಿದ್ದರು.
ಪೊಟೋಕ್ಯಾಪ್ಶನ್ : ಅತ್ತೂರು ಚರ್ಚ್‌ಗೆ ಡಾ.ಎಂ.ವೀರಪ್ಪ ಮೊಯ್ಲಿ ಭೇಟಿ ಮೊಂಬತ್ತಿ ಸೇವೆ ನೀಡಿದರು.