ಉಳ್ಳಾಲ ದರ್ಗಾ ಅಧ್ಯಕ್ಷರ ಆಯ್ಕೆ ವಿವಾದ ಸುಖಾಂತ್ಯ : ಹಾಜಿ ರಶೀದ್ ಉಳ್ಳಾಲ ಅಧಿಕಾರ ಸ್ವೀಕಾರ

Update: 2016-05-28 14:21 GMT

ಮಂಗಳೂರು, ಮೇ 28: ಉಳ್ಳಾಲ ಖಾಝಿ ಫಝಲ್ ಕೋಯಮ್ಮ ತಂಙಳ್ ಕೂರತ್ ಅವರು ಇಂದು ದರ್ಗಾಕ್ಕೆ ಭೇಟಿ ನೀಡಿ ಸಂಪ್ರದಾಯದಂತೆ ಹಾಜಿ ಅಬ್ದುಲ್ ರಶೀದ್ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ಈ ಮೂಲಕ ಕಳೆದ ಎರಡು ತಿಂಗಳುಗಳಿಂದ ಉಳ್ಳಾಲ ದರ್ಗಾ ಸಮಿತಿಗೆ ಅಧ್ಯಕ್ಷರ ಆಯ್ಕೆ ಸಂಬಂಧಿಸಿದ ಗೊಂದಲಕ್ಕೆ ತೆರೆ ಇಂದು ಸೆರೆ ಬಿದ್ದಂತಾಗಿದೆ.

ಶನಿವಾರ ಬೆಳಗ್ಗೆ ಉಳ್ಳಾಲ ದರ್ಗಾಕ್ಕೆ ಆಗಮಿಸಿದ ಖಾಝಿ ಅವರು ಮೊದಲಿಗೆ ಸಾಮೂಹಿಕ ಪ್ರಾರ್ಥನೆ ನಡೆಸಿದರು. ಬಳಿಕ ನಡೆದ ಸಭೆಯಲ್ಲಿ ದುವಾ ನೆರವೇರಿಸಿ ಮಾತನಾಡಿದರು. ದರ್ಗಾ ಆಡಳಿತಕ್ಕೆ ಸಂಬಂಧಿಸಿ ರಾಜಕೀಯವನ್ನು ಎಳೆದು ತರುವುದು ಬೇಡ. ಆದ್ದರಿಂದ ರಶೀದ್ ಹಾಜಿಯವರ ಅಧ್ಯಕ್ಷತೆಯಲ್ಲಿ ದರ್ಗಾ ಸಮಿತಿಯು ಉತ್ತಮ ಕಾರ್ಯ ನಿರ್ವಹಣೆ ಮಾಡಲಿ ಎಂದು ಹಾರೈಸಿದರು.

 ಇದೇ ಸಂದರ್ಭದಲ್ಲಿ ಅಧ್ಯಕ್ಷರು ಹಾಗೂ ನೂತನ ಕಮಿಟಿ ಸದಸ್ಯರು ಸೇರಿ ಖಾಝಿಯವರನ್ನು ಶಾಲು ಹೊದಿಸಿ ಸಮ್ಮಾನಿಸಿದರು.ಖಾಝಿಯವರು ಅಧ್ಯಕ್ಷ ರಶೀದ್ ಹಾಜಿ ಮತ್ತು ಕಮಿಟಿ ಪದಾಧಿಕಾರಿಗಳಿಗೆ ಕೀಲಿ ಕೈ ಹಸ್ತಾಂತರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News