×
Ad

ಬಂಡೆಗೆ ಕಾರು ಡಿಕ್ಕಿ: ಓರ್ವ ಸ್ಥಳದಲ್ಲೇ ಸಾವು

Update: 2016-05-28 20:37 IST

ಕಾರ್ಕಳ : ಗೃಹ ಪ್ರವೇಶದ ಸಡಗರ ಮುಗಿಸಿಕೊಂಡು ಉಡುಪಿಗೆ ವಾಪಾಸ್ಸಾಗುತ್ತಿದ್ದ ಮಾರುತಿ ವ್ಯಾಗನರ್ ಕಾರು ಚಾಲಕನ ನಿಯಂತ್ರಣ ತಪ್ಪಿ ಬಂಡೆಗೆ ಡಿಕ್ಕಿ ಹೊಡೆದ ಪರಿಣಾಮ ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದರೆ,ಇನ್ನುಳಿದವರು ಯಾವುದೇ ಅಪಾಯವಿಲ್ಲದೆ ಪಾರಾದ ಘಟನೆ ಕುಕ್ಕುಂದೂರು ಗ್ರಾಮದ ನಕ್ರೆ ಪಡ್ಯದಲ್ಲಿ ಶನಿವಾರ ನಡೆದಿದೆ.

ಉಡುಪಿ ತಾಲೂಕಿನ ಅಂಬಲಪಾಡಿ ನಿವಾಸಿಯಾದ ಸದಾನಂದ ಸುವರ್ಣ (67) ಮೃತಪಟ್ಟಿದ್ದಾರೆ. ಅವರ ಪತ್ನಿ ವಾರಿಜಾ (60) ಮಹೇಶ್ (45) ಸುಪ್ರಿತ್ (35) ಮನಸಾ 13 ಗಾಯಗೊಂಡು, ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಾರಿನಲ್ಲಿ ಚಾಲಕ ಸೇರಿ ಐದು ಮಂದಿ ಪ್ರಯಾಣಿಸುತ್ತಿದ್ದರು. ಅತೀ ವೇಗದಲ್ಲಿ ಚಲಿಸಿದ ಕಾರು ರಭಸದಿಂದ ಬಂಡೆಗೆ ಡಿಕ್ಕಿ ಹೊಡೆದಿದೆ. ಆದರೆ ಘಟನೆಗೆ ಕಾರಣ ಮಾತ್ರ ತಿಳಿದುಬಂದಿಲ್ಲ. ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News