×
Ad

ಸಿಎಂ ಭೇಟಿಯಾಗಿ ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸುವ ಭರವಸೆ

Update: 2016-05-28 21:03 IST

ಬೆಂಗಳೂರು, ಮೇ 28 : ಮಹತ್ವದ ಬೆಳವಣಿಗೆಯೊಂದರಲ್ಲಿ ಪಕ್ಷೇತರ ಶಾಸಕರು ಇಂಧನ ಸಚಿವ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಶನಿವಾರ ಸಂಜೆ ಭೇಟಿಯಾಗಿ ರಾಜ್ಯಸಭೆಗೆ ಕಾಂಗ್ರೆಸ್ ಅಭ್ಯರ್ಥಿಯನ್ನೇ ಬೆಂಬಲಿಸುವುದಾಗಿ ಹೇಳಿದ್ದಾರೆ. ಶನಿವಾರ ಸಂಜೆಯಷ್ಟೇ ಮಾಧ್ಯಮಗಳಿಗೆ ಪಕ್ಷೇತರ ಶಾಸಕರು ಜೆಡಿಎಸ್ ಅಭ್ಯರ್ಥಿ  ಬಿ.ಎಮ್. ಫಾರೂಕ್ ಅವರಿಗೆ ಸೂಚಕರಾಗಿ ಸಹಿ ಮಾಡಿದ ದಾಖಲೆ ಬಿಡುಗಡೆ ಮಾಡಿದ್ದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಇದರಿಂದ ತೀವ್ರ ಮುಖಭಂಗವಾಗಿದೆ. 

ಸರ್ಕಾರದ ಪರ ಅಭ್ಯರ್ಥಿ ಗೆಲ್ಲಿಸಲು 12ಮಂದಿ ಶಾಸಕರು ತೀರ್ಮಾನಿಸಿದ್ದೇವೆ.ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ನಾವೆಲ್ಲ ಒಗ್ಗಟ್ಟಾಗಿದ್ದರೆ ಸರ್ಕಾರ ನಮಗೆ ಸ್ಪಂದಿಸುತ್ತೇ. ಅನ್ನುವ ದೃಷ್ಟಿಯಿಂದ ಸರ್ಕಾರದ ಅಭ್ಯರ್ಥಿ ಬೆಂಬಲಿಸುತ್ತೇವೆ ಎಂದು ಕುಡಚಿ ಶಾಸಕ ಪಿ. ರಾಜೀವ್ ಅವರು ಹೇಳಿದ್ದಾರೆ. ಜೆಡಿಎಸ್ ಬಿಡುಗಡೆ ಮಾಡಿರುವ ಸೂಚಕರ ಪತ್ರದಲ್ಲಿರುವ ನಮ್ಮ ಸಹಿಯಿರುವ ಪಟ್ಟಿ ಹಳೆಯದು ಎಂದವರು ಹೇಳಿದ್ದಾರೆ. 

ಶಾಸಕರ ಕ್ಷೇತ್ರದ ದೃಷ್ಟಿಯಿಂದ ಮತ್ತು ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಕಾಂಗ್ರೆಸ್ ರಾಜ್ಯಸಭೆ ಅಭ್ಯರ್ಥಿಯನ್ನು ಬೆಂಬಲಿಸಲು  12 ಮಂದಿ ಶಾಸಕರು ತೀರ್ಮಾನಿಸಿದ್ದಾರೆ. ಸರ್ಕಾರ ಕೂಡ ಅವರನ್ನ ನಮ್ಮ ಸದಸ್ಯರಂತೆ ಪರಿಗಣಿಸಿ ಕ್ಷೇತ್ರದ ಅಭಿವೃದ್ಧಿ ಗೆ ನೆರವು ನೀಡಲು ನಿರ್ಧರಿಸಿದ್ದೇವೆ.ಅವರ ಕ್ಷೇತ್ರಗಳಿಗೆ ವಿಶೇಷ ಅನುದಾನ ನೀಡಲು ಸಿಎಂ ಒಪ್ಪಿದ್ದಾರೆ.ಜೆಡಿಎಸ್ ಪಕ್ಷ ಬಿಡುಗಡೆ ಮಾಡಿರುವ ಪಟ್ಟಿ ಈಗೀನದಲ್ಲ ಪಕ್ಷೇತರ ಶಾಸಕರಿಗೆ ಬೆದರಿಕೆ ಹಾಕಿದ್ದೇನೆ ಎಂಬ ಹೆಚ್ಡಿ ಕೆ ಆರೋಪ ಸತ್ಯಕ್ಕೆ ದೂರವಾಗಿದೆ.ಅವರ ಬಳಿ ದಾಖಲೆ ಇದ್ದರೆ ಬಿಡುಗಡೆ ಮಾಡಲಿ ಎಂದು ಶಿವಕುಮಾರ್ ಹೇಳಿದ್ದಾರೆ. 

ಶಾಸಕರಾದ ಅಶೊಕ್ ಖೇಣಿ, ಪಿ.ರಾಜೀವ್. ಸತೀಶ್ ಸೈಲ್ , ಮಂಕಾಳ ವೈದ್ಯ. ಅರವಿಂದ್ ಪಾಟೀಲ್, ಗುರು ಪಾಟೀಲ್ , ನಾಗೇಂದ್ರ ಭೇಟಿ ಮಾಡಿದ ನಿಯೋಗದಲ್ಲಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News