ಬಿಳಿನೆಲೆ: ವಿದ್ಯುತ್ ಅಘಾತಕ್ಕೆ ಮಹಿಳೆ ಬಲಿ
ಕಡಬ: ಎಚ್‌ಟಿ ಲೈನ್ ವಿದ್ಯತ್ ತಂತಿ ತುಂಡಾಗಿ ಎಲ್‌ಟಿ ಲೈನ್ ಮೇಲೇ ಬಿದ್ದು ವೋಲ್ಟೇಜ್ ಹೆಚ್ಚಾಗಿ ತಮ್ಮ ತೋಟದ ಪಂಪು ಶೆಡ್‌ನಲ್ಲಿ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಪುತ್ತೂರು ತಾಲೂಕಿನ ಬಿಳಿನೆಲೆ ಗ್ರಾಮದ ಎರ್ಮಾಯಿಲ್ ಎಂಬಲ್ಲಿ ಶನಿವಾರ ಸಂಜೆ ನಡೆದಿದೆ.
ಮೃತಪಟ್ಟವರನ್ನು ಎರ್ಮಾಯಿಲ್ ನಿವಾಸಿ ಜಯಪ್ರಕಾಶ್ ಎಂಬವರ ಪತ್ನಿ ದಿವ್ಯಲತಾ(28) ಎಂದು ಗುರುತಿಸಲಾಗಿದೆ. ಎರ್ಮಾಯಿಲ್ ಭಾಗದಲ್ಲಿ ಹಲವು ಮನೆಯ ಹತ್ತಿರದಿಂದಲೇ ಹಾಗೂ ಮನೆಯ ಮೇಲಿಂದಲೂ ವಿದ್ಯುತ್ ಎಚ್‌ಟಿ ಹಾಗೂ ಎಲ್‌ಟಿ ಲೈನ್‌ಗಳು ಒಟ್ಟೊಟ್ಟಿಗೆ ಇದ್ದು ಶನಿವಾರ ಸಂಜೆ ಎಚ್‌ಟಿ ಲೈನ್ ಎಲ್‌ಟಿ ಲೈನ್ ಮೇಲೆ ತುಂಡಾಗಿ ಬಿದ್ದು ಬಿದ್ದು ಹೈವೋಲ್ಟೇಜ್ ಬಂದಿದೆ. ಇದರಿಂದಾಗಿ ಈ ಭಾಗದ ಹಲವು ಮನೆಗಳ ವೈರಿಂಗ್, ಹಾಗೂ ಎಲೆಕ್ಟ್ರಾನಿಕ್ಸ್ ಸೊತ್ತುಗಳು ನಾಶವಾಗಿದೆ. ಮೃತ ಮಹಿಳೆ ದಿವ್ಯಲತಾ ತಮ್ಮ ಮನೆಯಲ್ಲಿದ್ದರು. ತೋಟದ ನೀರಿಗಾಗಿ ಬಳಕೆ ಮಾಡುತ್ತಿರುವ ಮನೆಯಂಗಲದಲ್ಲಿರುವ ಪಂಪು ಶೆಡ್‌ನಲ್ಲಿ ಭಾರೀ ಶಬ್ಧ ಉಂಟಾಯಿತು. ಶೆಡ್‌ನಲ್ಲಿ ಎನಾಗಿದೆ ಎಂದು ವೀಕ್ಷಿ್ಷಸಲು ಶೆಡ್ ಒಳಗೆ ಪ್ರವೇಶಿಸಿದಾಗ ವಿ ದ್ಯುತ್ ಶಾಕ್ ಆಗಿ ಮಹಿಳೆ ತೀವೃ ಅಸ್ವಸ್ಥರಾಗಿದ್ದಾರೆ, ಜಯಪ್ರಕಾಶ್ ಅವರು ಶೆಡ್ ಹತ್ತಿರ ಹೋಗುತ್ತಿದ್ದಂತೆ ಅವಘಢ ನಡೆದು ಹೋಗಿತ್ತು. ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದರೂ ಅಷ್ಟೊತ್ತಿಗಾಗಲೇ ಅವರ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ಜಯಪ್ರಕಾಶ್ ಅವರೂ ಅಸ್ವಸ್ಥಗೊಂಡಿದ್ದಾರೆ. ಮಹಿಳೆಯ ಮೃತದೇಹವನ್ನು ಕಡಬ ಸರಕಾರಿ ಆಸ್ಪತ್ರೆಗೆ ತರಲಾಯಿತು. ಸ್ಥಳಕ್ಕೆ ಮೆಸ್ಕಾಂ ಅಧಿಕಾರಿಗಳು ಹಾಗೂ ಡಬ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ಮಹಿಳೆಗೆ ಮೂರು ವರ್ಷದ ಹೆಣ್ಣು ಮಗೊವೊಂದಿದ್ದು. ಈ ಮಗು, ಪತಿ ಹಾಗೂ ಮನೆಯವರು ಆಕ್ರಂದನ ಮುಗಿಲುಮುಟ್ಟಿತ್ತು.
ಎರ್ಮಾಯಿಲ್ ಬಳಿಯಿರುವ ವಿದ್ಯುತ್ ಪರಿವರ್ತಕವೊಂದು ಆಗಾಗ ಕೆಟ್ಟು ಹೋಗಿ ಸಮಸ್ಯೆ ಉಂಟಾಗುತ್ತಿತ್ತು. ಇದು ಸರಿಯಿಲ್ಲ ತಕ್ಷಣ ಬೇರೆ ಪರಿವರ್ತಕವನ್ನು ಅಳವಡಿಸುವಂತೆ ಮೆಸ್ಕಾಂಗೆ ಹಲವು ಭಾರಿ ಮನವಿ ಮಾಡಿದರೂ ಈ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ವಿದ್ಯುತ್ ಪರಿವರ್ತಕ ಸರಿಯಿಲ್ಲದಿರುವುದರಿಂದಲೇ ಅವಘಡ ಅಂಭವಿಸಿದರೂ ಲೈನ್ ಆಫ್ ಆಗಿರಲಿಲ್ಲ. ಮಾತ್ರವಲ್ಲ ಇಲ್ಲಿನ ವಿದ್ಯತ್ ತಂತಿಗಳು ಹದಿನೈದು ವರ್ಷಕ್ಕೂ ಹೆಚ್ಚಿನ ಹಿಂದಿನದ್ದು. ಇದನ್ನು ಬದಲಾಯಿಸದೆ ಈಗ ತುಂಡಾಗಿ ಬೀಳುತ್ತಿವೆ, ಒಟ್ಟಾರೆ ಮೆಸ್ಕಾಂ ನಿರ್ಲಕ್ಷ್ಯದಿಂದ ಈ ಅನಾಹುತ ನಡೆದಿದೆ ಎಂದು ಇಲ್ಲಿನ ನಾಗರೀಕರು ದೂರಿದ್ದಾರೆ.
ಸುರೇಶ್ ಕುಮಾರ್: ಸಹಾಯಕ ಅಭಿಯಂತರರು ಮೆಸ್ಕಾಂ ಕಡಬ
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಮೆಸ್ಕಾಂ ಕಡಬ ಶಾಖಾ ಸಹಾಯಕ ಅಭಿಯಂತರ, ವಿದ್ಯುತ್ ತಂತಿಯಲ್ಲಿ ಉಂಟಾದ ಘಟನೆಗೂ ಮಹಿಳೆ ಸಾವಿಗೂ ಯಾವೂದೆ ಸಂಬಂದವಿಲ್ಲ. ಪಂಪು ಶೆಡ್‌ನೊಳಗೆ ಅರ್ಥಿಂಗ್ ಆಗಿ ಮಹಿಳೆ ಅಸ್ವಸ್ಥಗೊಂಡು ಮೃತಪಟ್ಟಿದ್ದಾರೆ.