ವಿದ್ಯುತ್ ನಿಲುಗಡೆ
ಉಡುಪಿ, ಮೇ 28: ಐಎಸ್‌ಪಿಆರ್‌ಎಲ್, ಪಾದೂರು ಇವರ ಉದ್ದೇಶಿತ 110 ಕೆವಿ ಸ್ಥಾವರಕ್ಕೆ ವಿದ್ಯುತ್ ಸಂಪರ್ಕ ನೀಡಲು ಪ್ರಗತಿಯಲ್ಲಿರುವ 110 ಕೆವಿ ವಿದ್ಯುತ್ ಮಾರ್ಗ ನಿರ್ಮಾಣ ಕಾಮಗಾರಿಗೆ 33/11 ಕೆವಿ ಪಾಂಬೂರು-ಶಿರ್ವ ಉಪವಿದ್ಯುತ್ ಕೇಂದ್ರದಿಂದ ಹೊರಡುವ 11 ಕೆವಿ ಕಳತ್ತೂರು ಮತ್ತು 11 ಕೆವಿ ಮುದರಂಗಡಿ ಫೀಡರ್ ಕ್ರಾಸಿಂಗ್ ಇರುವುದರಿಂದ ಮೇ 31ರಂದು ಬೆಳಗ್ಗೆ 9 ಗಂಟೆಯಿಂದ ಸಂಜೆ 5:30 ಗಂಟೆಯವರೆಗೆ ಕಾಪು ಮತ್ತು ಶಿರ್ವ ಶಾಖೆಗಳ ವ್ಯಾಪ್ತಿಯ ಹೇರೂರು, ಮಜೂರು, ಕೊಂಗುಡ್ಡೆ, ಕಳತ್ತೂರು, ಪಾದೂರು, ಮಲ್ಲಾರು, ಬೆಳಪು, ಪಕೀರ್ಣಕಟ್ಟೆ, ಚಂದ್ರನಗರ, ಕುತ್ಯಾರು, ಶೇಡಿಗುಡ್ಡೆ, ಬರೇಬೆಟ್ಟು, ಶಾಂತಿಗುಡ್ಡೆ, ಪಾಂಬೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುವುದು.
33/11 ಕೆ.ವಿ. ಕುಂಜಿಬೆಟ್ಟು ಉಪವಿದ್ಯುತ್ ಕೇಂದ್ರದಲ್ಲಿ ಹಾಗೂ ಕುಂಜಿಬೆಟ್ಟು ಉಪವಿದ್ಯುತ್ ಕೇಂದ್ರದಿಂದ ಹೊರಡುವ ಎಲ್ಲಾ 11 ಕೆವಿ ಫೀಡರ್‌ಗಳಲ್ಲಿ ತುರ್ತು ನಿರ್ವಹಣಾ ಕಾಮಗಾರಿಗಳನ್ನು ಹಮ್ಮಿಕೊಂಡಿರುವುದರಿಂದ ಮೇ 31ರಂದು ಬೆಳಗ್ಗೆ 9:30 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಉಡುಪಿ ನಗರ ಪ್ರದೇಶಗಳಾದ ಕುಂಜಿಬೆಟ್ಟು, ಕೃಷ್ಣಮಠ ಪರಿಸರ, ಒಳಕಾಡು, ಕೊಳಂಬೆ, ಮಿಶನ್ ಕಂಪೌಂಡ್, ಶಾಂತಿನಗರ, ಕಿನ್ನಿಮುಲ್ಕಿ, ಕೋರ್ಟ್ ರಸ್ತೆ, ಕೆ.ಎಂ. ಮಾರ್ಗ, ಮಾರುತಿ ವೀಥಿಕಾ, ಬೈಲೂರು, ಉದ್ಯಾವರ, ಪಿತ್ರೋಡಿ, ಕಡೆಕಾರ್,ಪಣಿಯಾಡಿ, ಚಿಟ್ಟಾಡಿ, ಇಂದಿರಾನಗರ, ಹನುಮಾನ್ ಗ್ಯಾರೇಜ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುವುದು ಎಂದು ಪ್ರಕಟನೆ ತಿಳಿಸಿದೆ