"ಪಾಕಿಸ್ತಾನಕ್ಕೆ ಐದು ನಿಮಿಷಗಳಲ್ಲಿ ದಿಲ್ಲಿಯ ಮೇಲೆ ದಾಳಿ ಮಾಡುವ ಸಾಮರ್ಥ್ಯವಿದೆ"
ಇಸ್ಲಾಮಾಬಾದ್, ಮೇ 29: ಪಾಕಿಸ್ತಾನ 1984ರಲ್ಲೇ ಅಣ್ವಸ್ತ್ರ ಸನ್ನದ್ಧ ದೇಶವಾಗಿತ್ತು. ಆದರೆ ಅಂದಿನ ಅಧ್ಯಕ್ಷರಾಗಿದ್ದ ಜನರಲ್ ಜಿಯಾ ಉಲ್ ಹಕ್ ಅವರು ಈ ಅಣ್ವಸ್ತ್ರ ತಯಾರಿಕೆಯ ಪ್ರಸ್ತಾವಕ್ಕೆ ವಿರೋಧ ವ್ಯಕ್ತಪಡಿಸಿದ್ದರು ಎಂದು ಪಾಕಿಸ್ತಾನ ಅಣು ಯೋಜನೆಯ ರೂವಾರಿ ಡಾ.ಅಬ್ದುಲ್ ಖಾದಿರ್ ಖಾನ್ ಪ್ರಕಟಿಸಿದ್ದರೆ.
ಮೊದಲ ಅಣ್ವಸ್ತ್ರ ಪರೀಕ್ಷೆ ವಾರ್ಷಿಕ ಸಂಭ್ರಮದಲ್ಲಿ ಅವರು ಮಾತನಾಡಿದರು. 1998ರಲ್ಲಿ ಅವರ ಮೇಲ್ವಿಚಾರಣೆಯಲ್ಲಿ ಪಾಕಿಸ್ತಾನ ಮೊದಲ ಅಣ್ವಸ್ತ್ರ ಪರೀಕ್ಷೆ ನಡೆಸಿತ್ತು. ನಾವು ಇದಕ್ಕೆ 1984ರಲ್ಲೇ ಸಿದ್ಧವಾಗಿದ್ದೆವು. ಆದರೆ ಅಧ್ಯಕ್ಷರು ಅದಕ್ಕೆ ಅನುಮತಿ ನೀಡಿರಲಿಲ್ಲ ಎಂದು ಸ್ಪಷ್ಟಪಡಿಸಿದರು.
1979ರಿಂದ 1988ರ ವರೆಗೂ ಈ ನೀತಿಯನ್ನು ಪಾಕಿಸ್ತಾನ ಅನುಸರಿಸಿತ್ತು. ದಿಲ್ಲಿ ಮೇಲೆ ಐದು ನಿಮಿಷಗಳಲ್ಲಿ ದಾಳಿ ಮಾಡುವ ಸಾಮರ್ಥ್ಯವನ್ನು ನಮ್ಮ ದೇಶ ಹೊಂದಿದೆ. ರಾವಲ್ಪಿಂಡಿ ಬಳಿಯ ಕಹೂತಾದಿಂದ ಈ ದಾಳಿ ನಡೆಸಲು ಸಿದ್ಧವಿದೆ ಎಂದು ವಿವರಿಸಿದರು. ಅಣ್ವಸ್ತ್ರ ಹೊಂದಿದ ಮೊದಲ ಇಸ್ಲಾಂ ದೇಶವಾಗಲು ತಮ್ಮ ಸೇವೆ ಇಲ್ಲದೆ ಸಾಧ್ಯವೇ ಇರಲಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.