ಅಮೆರಿಕ: ಗೋರಿಲ್ಲಾ ಬೋನಿಗೆ ಬಿದ್ದ ಬಾಲಕ
Update: 2016-05-29 13:44 IST
ವಾಷಿಂಗ್ಟನ್, ಮೇ 29: ಅಮೆರಿಕದಲ್ಲಿ ಮೂರು ವರ್ಷದ ಬಾಲಕ ಆಕಸ್ಮಿಕವಾಗಿ ಗೊರಿಲ್ಲಾಗಳಿರುವ ಬೇಲಿಯೊಳಗೆ ಬಿದ್ದ ಕಾರಣ ಬಾಲಕನನ್ನು ರಕ್ಷಿಸುವ ಉದ್ದೇಶದಿಂದ 17 ವರ್ಷ ಪ್ರಾಯದ ಗೋರಿಲ್ಲಾವನ್ನು ಮೃಗಾಲಯದ ಸಿಬ್ಬಂದಿಗಳು ಸಾಯಿಸಿದ ಘಟನೆ ನಡೆದಿದೆ.
ಅಮೆರಿಕದ ಸಿನ್ಸಿನಾಟಿಯಲ್ಲಿರುವ ಝೂನಲ್ಲಿ ಗೋರಿಲ್ಲಾಗಳಿರುವ ಬೇಲಿಯ ಆವರಣದ ತಡೆ ಗೋಡೆಯ ಮೇಲೆ ಅಂಬೆಗಾಲಿಡುತ್ತಾ ಸಾಗಿದ್ದ ಬಾಲಕ ಆಯತಪ್ಪಿ ಗೋರಿಲ್ಲಾಗಳಿರುವ ಜಾಗಕ್ಕೆ ಬಿದ್ದಿದ್ದಾನೆ.
400 ಪೌಂಡ್ಸ್(180ಕೆಜಿ) ತೂಕದ ಗೋರಿಲ್ಲಾ ಬಾಲಕನತ್ತ ಧಾವಿಸಿ ಆತನನ್ನು ಹಿಡಿದುಕೊಂಡಿದೆ. ಕೂಡಲೇ ಕಾರ್ಯಪ್ರವೃತ್ತರಾದ ಮೃಗಾಲಯದ ತುರ್ತು ಸ್ಪಂದನಾ ತಂಡ ಗೋರಿಲ್ಲಾವನ್ನು ಕೊಂದು ಬಾಲಕನನ್ನು ರಕ್ಷಿಸಿದರು.
ಅಲ್ಪ-ಸ್ವಲ್ಪ ಗಾಯಗೊಂಡಿರುವ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಜೀವಾಪಾಯದಿಂದ ಪಾರಾಗಿದ್ದಾನೆ ಎಂದು ಮಾಧ್ಯಮಗಳನ್ನು ಉಲ್ಲೇಖಿಸಿ ಅಮೆರಿಕದ ಪೊಲೀಸರು ತಿಳಿಸಿದ್ದಾರೆ.
.