×
Ad

ಟ್ರಂಪ್ ರಾಷ್ಟ್ರಪತಿಯಾಗುವುದು ಜಗತ್ತಿಗೆ ಅಪಾಯ!: ಸಮೀಕ್ಷೆ

Update: 2016-05-29 13:48 IST

ವಾಷಿಂಗ್ಟನ್, ಮೇ 29: ಅಮೆರಿಕ ಅಧ್ಯಕ್ಷನಾಗುವ ಧಾವಂತದಲ್ಲಿರುವ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಒಂದು ವೇಳೆ ಅಧ್ಯಕ್ಷನಾಗಿ ಚುನಾಯಿತಗೊಂಡರೆ ಅದು ವಿಶ್ವಕ್ಕೆ ಅಪಾಯಕಾರಿಯಾಗಲಿದೆ.

ಸಮೀಕ್ಷೆಯಲ್ಲಿ ಈ ವಿಷಯಗಳು ಬೆಳಕಿಗೆ ಬಂದಿವೆ:

ಒಂದು ಅಂತಾರಾಷ್ಟ್ರೀಯ ಸಮೀಕ್ಷೆಯಲ್ಲಿ ಅಮೆರಿಕದ ಅಧ್ಯಕ್ಷನಾಗಿ ಟ್ರಂಪ್ ಆಯ್ಕೆಗೊಂಡರೆ ಭಯೋತ್ಪಾದನಾ ದಾಳಿಗಳಲ್ಲಿ ಹೆಚ್ಚಳವಾಗುತ್ತದೆ. ಇದರಿಂದ ವಿಶ್ವದ ಅರ್ಥವ್ಯವಸ್ಥೆಯ ಮೇಲೆ ಮಾರಕ ಪರಿಣಾಮವಾಗಲಿದೆ. ಈ ಸಮೀಕ್ಷೆಯನ್ನು ವಿಶ್ವದಾದಂತ್ಯ ಜನ ಅಭಿಮತದ ಆಧಾರದಲ್ಲಿ ತಯಾರಿಸಲಾಗಿದ್ದು ಇದರಲ್ಲಿ ಫ್ರಾನ್ಸ್,ಜರ್ಮನಿ,ಬ್ರಿಟನ್, ಮೆಕ್ಸಿಕೊ, ಕೆನಡ, ಜಪಾನ್‌ನ ನಾಗರಿಕರು ಪಾಲ್ಗೊಂಡಿದ್ದಾರೆ.

ಭಯದ ವಾತಾವರಣ ಇನ್ನಷ್ಟು ಆಳದಲ್ಲಿರಲಿದೆ:

ಇನ್ನೊಂದೆಡೆ ಡೊನಾಲ್ಡ್ ಟ್ರಂಪ್‌ರ ಬೆಂಬಲಿಗರಿಂದ ಟ್ವಿಟರ್‌ನಲ್ಲಿ ಭಯೋತ್ಪಾದಕ ಎಂದು ಕರೆಯಲಾದ ಅಮೆರಿಕದ ಸಿಖ್ ನಾಯಕ ರವೀಂದರ್ ಭಲ್ಲಾ "ಟ್ರಂಪ್ ವಿದೇಶೀಯರ ಕುರಿತು ಅಸಹಿಷ್ಣುತಾ ನಿಲುವನ್ನು ಪ್ರಕಟಿಸುವ ರಾಜಕೀಯ ಭಾಷಣದಿಂದಾಗಿ ಅಮೆರಿಕದಲ್ಲಿರುವ ಅಲ್ಪಸಂಖ್ಯಾತ ಸಮುದಾಯದ ಕುರಿತು ಭಯದ ವಾತಾವರಣ ಇನ್ನಷ್ಟು ಆಳವಾಗಿದೆ. ಈ ನಡುವೆ ಟ್ರಂಪ್‌ರ ಸೆಂಟಿಯಾಗೊದ ರ್ಯಾಲಿಯೊಂದರಲ್ಲಿ ಹೊರಗೆ ನೂರಾರು ಬೆಂಬಲಿಗರು ಮತ್ತು ವಿರೋಧಿ ಪ್ರತಿಭಟನಾಕಾರರ ನಡುವೆ ಘರ್ಷಣೆ ನಡೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News