×
Ad

ಭಾರತೀಯ ಯುವ ಲೇಖಕಿಗೆ ಸ್ಕಾಲಸ್ಟಿಕ್ ಏಶ್ಯನ್ ಪುರಸ್ಕಾರ

Update: 2016-05-29 17:39 IST

 ಸಿಂಗಾಪುರ್, ಮೇ 29: ಸ್ಕಾಲಸ್ಟಿಕ್ ಏಶ್ಯನ್ ಬುಕ್ ಪ್ರಶಸ್ತಿಗೆ ಭಾರತೀಯ ಯುವ ಲೇಖಕಿ ಅದಿತಿ ಕೃಷ್ಣಕುಮಾರ್ ಭಾಜನರಾಗಿದ್ದಾರೆ. ಮೂವತ್ತೊಂದು ವರ್ಷದ ಅದಿತಿಯ ’ಕೋಡ್ಸ್ ದ ಲಾಸ್ಟ್ ಟ್ರಷರ್ ಆಫ್ ಇಂಡಸ್’ ಎಂಬ ಕೃತಿಗೆ ಈ ಪುರಸ್ಕಾರ ಲಭಿಸಿದೆ. ಭಾರತದ ಇತಿಹಾಸದ ಮೇಲೆ ಅದಿತಿ ಹೊಂದಿರುವ ಅಗಾಧ ಪ್ರೀತಿಯನ್ನು ತೋರ್ಪಡಿಸುವ 32,000 ಪದಗಳ ಹಸ್ತಬರಹದಲ್ಲಿರುವ ಕೃತಿಯಿದು. ಪ್ರಶಸ್ತಿಯು 10,000 ಸಿಂಗಾಪುರ ಡಾಲರ್ ಬಹುಮಾನವನ್ನು ಹೊಂದಿದೆ.

 ಕಳೆದ ಸೆಪ್ಟಂಬರ್‌ನಲ್ಲಿ ಪ್ರಶಸ್ತಿಗಾಗಿ ಅವರು ತನ್ನ ಹಸ್ತಬರಹದ ಕೃತಿಯನ್ನು ಸಲ್ಲಿಸಿದ್ದರು. ಅದಿತಿ ಸಿಂಗಾಪುರದಲ್ಲಿ ಕಳೆದ ವರ್ಷಗಳಿಂದ ಸಿಂಗಾಪುರದಲ್ಲಿ ವಾಸಿಸುತ್ತಿದ್ದಾರೆ. ಬರಹ, ಕೆಲಸವನ್ನು ಜೊತೆಜೊತೆ ನಿರ್ವಹಿಸಲು ಇಷ್ಟಪಡುವ ಅದಿತಿ ವಾರದ ಕೊನೆಯಲ್ಲಿ ಮತ್ತುರಜಾದಿನಗಳಲ್ಲಿ ಕಥೆಗಳನ್ನು ಬರೆಯುತ್ತಾರೆ. ನ್ಯಾಶನಲ್ ಬುಕ್ ಡೆವಲಪ್‌ಮೆಂಟ್ ಕೌನ್ಸಿಲ್ ಮತ್ತು ಸ್ಕಾಲಸ್ಟಿಕ್ ಏಶ್ಯಾ ಜಂಟಿಯಾಗಿ ಸ್ಕಾಲಸ್ಟಿಕ್ ಏಶ್ಯನ್ ಬುಕ್ ಪ್ರಶಸ್ತಿಯನ್ನು ನೀಡುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News