ಕಂಚಿನಡ್ಕ: ಮುಸ್ಲಿಮ್ ವೆಲ್ಫೇರ್ ಅಸೋಸಿಯೇಶನ್‌ನಿಂದ ಉಚಿತ ಸಾಮೂಹಿಕ ವಿವಾಹ

Update: 2016-05-29 13:27 GMT

ಪಡುಬಿದ್ರೆ, ಮೇ 29: ಪಡುಬಿದ್ರಿ ಕಂಚಿನಡ್ಕದ ಮುಸ್ಲಿಮ್ ವೆಲ್ಫೇರ್ ಅಸೋಸಿಯೇಶನ್‌ನ 23ನೆ ವಾರ್ಷಿಕೋತ್ಸವ ಅಂಗವಾಗಿ 3ನೆ ಬಾರಿಗೆ ಹಮ್ಮಿಕೊಳ್ಳಲಾದ ಉಚಿತ ಸಾಮೂಹಿಕ ವಿವಾಹ ಸಮಾರಂಭ ರವಿವಾರ ಕಂಚಿನಡ್ಕ ಮಸೀದಿ ವಠಾರದಲ್ಲಿ ನಡೆಯಿತು.

ಪಡುಬಿದ್ರೆ ಜುಮಾ ಮಸೀದಿಯ ಖತೀಬ್ ಎಸ್.ಎಂ. ಅಬ್ದುರ್ರಹ್ಮಾನ್ ಮದನಿ ನಿಖಾಹ್ ನೇತೃತ್ವ ವಹಿಸಿದ್ದರು.ಜುಮಾ ಮಸೀದಿಯ ಅಧ್ಯಕ್ಷ ಪಿ.ಎ.ಅಬ್ದುರ್ರಹ್ಮಾನ್ ಪಡುಬಿದ್ರೆ ಅಧ್ಯಕ್ಷತೆ ವಹಿಸಿದ್ದರು.

ಉಡುಪಿ ಜಂಇಯತುಲ್ ಫಲಾಹ್ ಅಧ್ಯಕ್ಷ ಕೆ.ಅಬ್ದುಲ್ಲಾ ಪರ್ಕಳ, ಅಸೋಸಿಯೇಶನ್ ಅಧ್ಯಕ್ಷ ಕೆ. ಇಸ್ಮಾಯೀಲ್ ಕಂಚಿನಡ್ಕ, ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನಚಂದ್ರ ಜೆ.ಶೆಟ್ಟಿ, ಅದಾನಿ ಯುಪಿಸಿಎಲ್ ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ, ಪಡುಬಿದ್ರೆ ಗ್ರಾಮ ಪಂಚಾಯತ್ ಉಪಾಧ್ಯಕ್ಷ ವೈ.ಸುಕುಮಾರ್, ಅಸೋಸಿಯೇಶನ್ ಗೌರವಾಧ್ಯಕ್ಷ ಪಿ.ಹಾಜಬ್ಬ ಕಂಚಿನಡ್ಕ, ಕಾಪು ಬಿಜೆಪಿ ಕ್ಷೇತ್ರ ಕಾರ್ಯದರ್ಶಿ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಜಿಲ್ಲಾ ಪಂಚಾಯತ್ ಸದಸ್ಯ ಶಶಿಕಾಂತ್ ಪಡುಬಿದ್ರಿ, ರಾಜ್ಯ ಮೀನುಗಾರಿಕಾ ನಿಗಮದ ನಿರ್ದೇಶಕ ದೀಪಕ್ ಕುಮಾರ್ ಎರ್ಮಾಳ್, ಗ್ರಾಪಂ ಸದಸ್ಯ ಹಸನ್ ಬಾವ, ಎಸ್‌ವೈಎಸ್ ಪಡುಬಿದ್ರೆ ಸೆಂಟರ್‌ನ ಅಧ್ಯಕ್ಷ ಎ.ಕೆ.ಸೈಯದ್ ಆಲಿ, ಎಸೆಸೆಫ್ ಅಧ್ಯಕ್ಷ ಪಿ.ಎಂ. ಸಿದ್ದೀಕ್, ಎಸ್.ಪಿ. ಉಮ್ಮರ್ ಫಾರೂಕ್, ಅಬ್ದುಲ್ ಖಾದರ್, ಇಸ್ಮಾಯೀಲ್ ಮಾಸ್ಟರ್, ಮೊಯ್ದೀನ್ ಉಚ್ಚಿಲ್, ಖಲಂದರ್ ತಿ ರಝ್ವಿ ಬೆಜ್ಜವಳ್ಳಿ, ಗಣೇಶ್ ಕೋಟ್ಯಾನ್, ಹರೀಶ್ ಕಂಚಿನಡ್ಕ, ಮುಹಮ್ಮದ್ ಹುಸೇನ್ ಉಪಸ್ಥಿತರಿದ್ದರು.

ಮೂಡುಪೆರಾರು ಮುಂಡೇವು ಅಮನುಲ್ಲಾ ಶಾರ ಪುತ್ರಿ ಸಬೀನಾ ಬಾನು ಜತೆ ಮೈಸೂರು ಕೆ.ಆರ್.ನಗರದ ಯೂಸುಫ್‌ರ ಪುತ್ರ ಸಮೀರ್ ಮತ್ತು ಮಣಿಪಾಲ ಬಡಗುಬೆಟ್ಟು ಮುಹಮ್ಮದ್‌ರ ಪುತ್ರಿ ಮಿಶ್ರಿಯಾ ಮುಂಬೈ ಘಾಟ್‌ಕೊಪರ್ ಮುಹಮ್ಮದ್ ಆಲಿ ಶಾರ ಪುತ್ರ ಮುಹಮ್ಮದ್ ಶಮೀರ್‌ರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ನೂತನ ವಧೂವರರಿಗೆ ಅಸೋಸಿಯೇಶನ್ ವತಿಯಿಂದ ತಲಾ 5 ಪವನ್ ಚಿನ್ನ, ಬಟ್ಟೆಬರೆ, ವಾಚ್‌ಗಳನ್ನು ಉಡುಗೊರೆಯಾಗಿ ನೀಡಲಾಯಿತು.

ಕಂಚಿನಡ್ಕ ಜುಮಾ ಮಸೀದಿಯ ಖತೀಬ್ ಅಬ್ದುಲ್ಲತೀಫ್ ಮದನಿ ಪ್ರಾಸ್ತಾವಿಕ ಮಾತನಾಡಿದರು. ಅಬ್ದುರ್ರಝಾಕ್ ಕಂಚಿನಡ್ಕ ಸ್ವಾಗತಿಸಿದರು. ಗಝಾಲಿ ವಿಟ್ಲ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News