ಪಿಎಫ್‌ಐ ಬಿ.ಸಿ.ರೋಡ್ ವಲಯದಿಂದ ರಕ್ತದಾನ ಶಿಬಿರ
ಬಂಟ್ವಾಳ, ಮೇ 30: ಪ್ರಸ್ತುತ ದಿನಗಳಲ್ಲಿ ರಕ್ತದಾನಕ್ಕೆ ಜಾಗತಿಕ ಮಟ್ಟದಲ್ಲಿ ಹೆಚ್ಚೆಚ್ಚು ವಿಶೇಷ ಮಹತ್ವ ಲಭ್ಯವಾಗುತ್ತಿದ್ದು, ರಕ್ತದಾನ ಮಾಡುವುದರಿಂದ ಒಂದು ಜೀವವನ್ನು ಉಳಿಸಬಹುದಲ್ಲದೆ ನಾವೂ ಆರ್ಯೋಗ್ಯವಂತರಾಗಿ ಬದುಕಲು ಸಹಕಾರಿಯಾಗಿದೆ. ಇಂತಹ ಮಹತ್ವದ ಕಾರ್ಯದಲ್ಲಿ ಪಿಎಫ್‌ಐ ಸಂಘಟನೆ ಯುವ ಜನತೆಯನ್ನು ತೊಡಗಿಸಿರುವುದು ಶಾಘ್ಲಾನೀಯವಾಗಿದೆ ಎಂದು ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಯ ಫಾದರ್ ರೋಶನ್ ಕ್ರಾಸ್ಟ ಹೇಳಿದರು.
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಬಿ.ಸಿ.ರೋಡ್ ವಲಯ ಮತ್ತು ಫಾದರ್ ಮುಲ್ಲರ್ ಆಸ್ಪತ್ರೆ ಕಂಕನಾಡಿ ಇವುಗಳ ಸಂಯುಕ್ತ ಆಶ್ರಯದಲ್ಲಿ ರವಿವಾರ ಬೆಳಗ್ಗೆ ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಈ ವೇಳೆ ಅವರು ಶಿಬಿರದಲ್ಲಿ ರಕ್ತದಾನ ಮಾಡುವ ಮೂಲಕ ತನ್ನ ಹುಟ್ಟುಹಬ್ಬವನ್ನು ಆಚರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಿಎಫ್‌ಐ ಬಿ.ಸಿ.ರೋಡ್ ವಲಯಾಧ್ಯಕ್ಷ ಇಕ್ಬಾಲ್ ಮದ್ದ ವಹಿಸಿದ್ದರು.
ತುಂಬೆ ಮುಹಿಯುದ್ದೀನ್ ಜುಮಾ ಮಸೀದಿ ಖತೀಬರಾದ ಇಸ್ಮಾಯೀಲ್ ಫೈಝಿ, ಪಿಎಫ್‌ಐ ಬಿ.ಸಿ.ರೋಡ್ ವಲಯ ಸದಸ್ಯ ಇಮ್ತಿಯಾರ್ ತುಂಬೆ ಕಾರ್ಯಕ್ರವನ್ನುದ್ದೇಶಿಸಿ ಮಾತನಾಡಿದರು.
ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಯ ವರಿಷ್ಠಧಿಕಾರಿ ಕಿರಣ್ ಶೆಟ್ಟಿ, ಎಸ್‌ಡಿಪಿಐ ಪುದು ವಲಯಾಧ್ಯಕ್ಷ ಸುಲೈಮಾನ್ ಉಸ್ತಾದ್, ತುಂಬೆ ಗ್ರಾಮ ಪಂಚಾಯತ್ ಸದಸ್ಯ ಝಹೂರ್ ಅಹ್ಮದ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶಿಬಿರದಲ್ಲಿ 80 ಮಂದಿ ರಕ್ತದಾನಿಗಳು ಭಾಗವಹಿಸಿ ರಕ್ತದಾನ ಮಾಡಿದರು. ಪಿಎಫ್‌ಐ ಸದಸ್ಯರಾದ ಅಕ್ಬರ್ ಅಲಿ ವಲವೂರು ಸ್ವಾಗತಿಸಿದರು. ಶಮೀರ್ ಧನ್ಯವಾದ ಗೈದರು. ಖಾದರ್ ಕಾರ್ಯಕ್ರಮ ನಿರೂಪಿಸಿದರು.