×
Ad

ಜಗತ್ತಿನ ಅತ್ಯಂತ ಭ್ರಷ್ಟ ದೇಶ ಇಂಗ್ಲೆಂಡ್

Update: 2016-05-30 16:10 IST

ಇಂಗ್ಲೆಂಡ್ :ಇಟಾಲಿಯನ್ ಮಾಫಿಯಾ ಜಾಲವನ್ನು ಬೇಧಿಸಲು ಒಂದು ದಶಕಕ್ಕೂ ಹೆಚ್ಚು ಕಾಲಶ್ರಮಿಸಿದ ಪತ್ರಕರ್ತ ರಾಬರ್ಟೋ ಸಾವಿಯಾನೊ ಪ್ರಕಾರ ಜಗತ್ತಿನ ಅತ್ಯಂತ ಭ್ರಷ್ಟ ದೇಶ ಇಂಗ್ಲೆಂಡ್ ಆಗಿದೆ.

ಅಂತರಾಷ್ಟ್ರೀಯ ಬೆಸ್ಟ್ ಸೆಲ್ಲರ್ ಕೃತಿಗಳಾದ‘ಗೊಮೊರ್ರ’ ಮತ್ತು ‘ಝೀರೋಝೀರೋಝೀರೋ’ ಇದರ ಲೇಖಕರಾದ ಸಾವಿಯಾನೊ 2006ರಲ್ಲಿ ತಾನು ಪ್ರಭಾವಶಾಲಿ ನಿಯೋಪಾಲಿಟನ್ ಕ್ರೈಮ್ ಸಿಂಡಿಕೇಟ್ ಕ್ಯಾಮೊರ್ರವನ್ನು ಸಾರ್ವಜನಿಕವಾಗಿ ಟೀಕಿಸಿದಂದಿನಿಂದ ಪೊಲೀಸ್ ರಕ್ಷಣೆಯಲ್ಲಿದ್ದು ಶನಿವಾರದಂದು ಹೇ ಸಾಹಿತ್ಯೋತ್ಸವದಲ್ಲಿಸುರಕ್ಷಾ ಪಡೆಗಳ ಬೆಂಗಾವಲಿನೊಂದಿಗೆಅಪರೂಪವಾಗಿ ಸಾರ್ವಜನಿಕವಾಗಿ ಕಾಣಿಸಿಕೊಂಡರು.

‘‘ಜಗತ್ತಿನಲ್ಲಿಯೇ ಅತ್ಯಂತ ಭ್ರಷ್ಟ ಜಾಗ ಯಾವುದೆಂದು ನಿಮ್ಮನ್ನು ಕೇಳಿದರೆ ನೀವು ಅಫ್ಗಾನಿಸ್ಥಾನ, ಗ್ರೀಸ್, ನೈಜೀರಿಯಾ, ಎಂದು ಹೇಳಬಹುದು. ಆದರೆ ನಾನು ಇಂಗ್ಲೆಂಡ್ ಎಂದು ಹೇಳುತೇನೆ,’’ಎಂದರು.

‘‘ಭ್ರಷ್ಟವಾಗಿರುವುದು ಅಧಿಕಾರಿ ವರ್ಗವಲ್ಲ, ಪೊಲೀಸರಲ್ಲ್ಲ, ರಾಜಕೀಯವಲ್ಲ ಬದಲಾಗಿ ಇಲ್ಲಿನ ವಾಣಿಜ್ಯ ರಂಗ. ಲಂಡನ್ನಿನಲ್ಲಿಬಂಡವಾಳ ಹೂಡಿರುವ ಹಲವರ ಮುಖ್ಯ ಕಾರ್ಯಾಲಯಗಳು ದೇಶದ ಹೊರಗಿವೆ,’’ಎಂದವರು ಹೇಳಿದರು.

‘‘ಯುರೋಪಿನ ಕ್ರಿಮಿನಲ್ ರಾಜಧಾನಿಗೆಜರ್ಸಿ ಹಾಗೂ ಕೇಮ್ಯಾನ್ ಪ್ರವೇಶ ನೀಡುವ ಸಾಧನಗಳಾಗಿವೆ ಹಾಗೂ ಇಂಗ್ಲೆಂಡ್ ಇವುಗಳಿಗೆ ಅನುಮತಿಸಿದೆ. ಯುರೋಪಿಯನ್ ಯೂನಿಯನ್ ತ್ಯಜಿಸಿದರೆ ಇಂಗ್ಲೆಂಡ್ ಗಂಭೀರ ಪರಿಣಾಮ ಎದುರಿಸಬೇಕಾಗಬಹುದು,’’ಎಂದೂ ಅವರು ಎಚ್ಚರಿಸಿದ್ದಾರೆ.

ಕ್ಯಾಮೊರ್ರದ ನಿರ್ವಹಣೆಯನ್ನು ಟೀಕಿಸಿ ಲೇಖನವೊಂದನ್ನು ಬರೆದಿದ್ದ ಸ್ಥಳೀಯ ಪಾದ್ರಿಯೊಬ್ಬರ ಸಾವಿನ ನಂತರ2000ರ ಆರಂಭದಲ್ಲಿ ಸಾವಿಯಾನೊ ಇಟೆಲಿಯಲ್ಲಿನ ಸಂಘಟಿತ ಅಪರಾಧದ ಬಗ್ಗೆ ಬರೆಯಲಾರಂಭಿಸಿದ್ದರು. ಅವರ ಕಾದಂಬರಿ ‘ಗೊಮೊರ್ರ’ ಸಂಘಟಿತ ಅಪರಾಧಗಳತ್ತ ಬೆಳಕು ಚೆಲ್ಲಿದಾಗ ಅವರಿಗೆ ಜೀವ ಬೆದರಿಕೆಯೊಡ್ಡಲಾಯಿತಲ್ಲದೆ ಅವರನ್ನೂ ಅವರ ಪೊಲೀಸ್ ಬೆಂಗಾವಲು ಪಡೆಯನ್ನು ಬಾಂಬ್ ಸ್ಫೋಟಿಸಿ ಸಾಯಿಸುವುದಾಗಿ ಹೇಳಲಾಯಿತು.

‘‘ನನ್ನನ್ನು ಕೊಲೆ ಮಾಡಿಲ್ಲವಾದುದರಿಂದ ನಾನು ಅದೃಷ್ಟವಂತ ಎಂದುಕೊಳ್ಳುತ್ತೇನೆ. ಇಂತಹ ವಿಚಾರಗಳನ್ನು ಬಹಿರಂಗ ಪಡಿಸಿದಾಗನಮ್ಮ ಜೀವನ ಅಪಾಯದಲ್ಲಿದೆಯೆಂಬುದರ ಅರಿವಿರುತ್ತದೆ. ಆದರೆ ಇದರಿಂದುಂಟಾಗುವ ಮಾನಹಾನಿಎಲ್ಲದಕ್ಕಿಂತ ಹೆಚ್ಚು ಭಯ ಹುಟ್ಟಿಸುವಂತಹದ್ದು,’’ಎಂದು ಸಾವಿಯಾನೊ ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News