×
Ad

ಕೊಪ್ಪ ಪತ್ರಕರ್ತನ ಮೇಲೆ ಹಲ್ಲೆ : ಆರೋಪ

Update: 2016-05-30 16:11 IST

ಉಡುಪಿ, ಮೇ 30: ಕೊಪ್ಪ, ನಡುಬೇಗಾರು ನಿವಾಸಿ ರಿಯಾಝ್ ಬಿನ್ ಹೈದರ್ ಎಂಬವರು ಮೇ 28 ರಂದು ರಾತ್ರಿ 9.45ಕ್ಕೆ ಕೆಲಸ ಮುಗಿಸಿಕೊಂಡು ಮನೆಗೆ ಹೋಗುತ್ತಿದ್ದ ವೇಳೆ ಕೊಪ್ಪ ಪಟ್ಟಣದ ಮೇಲಿನ ಪೇಟೆಯ ರಿಯಾಝ್ ಎಂಬಾತ ತಡೆದು ನಿಲ್ಲಿಸಿ ಈ ಹಿಂದೆ ನಡೆದ ಗಲಾಟೆಯ ವಿಚಾರದಲ್ಲಿ ನನ್ನ ವಿರುದ್ಧವಾಗಿ ಬೇರೆಯವರಿಗೆ ಸಪೋರ್ಟ್ ಮಾಡಿದ್ದಿ ಎಂದು ಆರೋಪಿಸಿ, ಅವಾಚ್ಯ ಶಬ್ಧಗಳಿಂದ ನಿಂದಿಸಿ ಹಲ್ಲೆ ಮಾಡಿರುವುದಾಗಿ ಇಲ್ಲಿನ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

ಗಾಯಗೊಂಡ ರಿಯಾಝ್ ಇಲ್ಲಿನ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News