ರಕ್ಷಿತಾರಣ್ಯದಲ್ಲಿ ಶಿಕಾರಿ: ಆರೋಪಿಗೆ ಜಾಮೀನು
Update: 2016-05-30 17:24 IST
ಪುತ್ತೂರು, ಮೇ 30: ರಕ್ಷಿತಾರಣ್ಯದಲ್ಲಿ ಶಿಕಾರಿ ನಡೆಸಲು ಯತ್ನಿಸುತ್ತಿದ್ದು, ಅರಣ್ಯ ಅಧಿಕಾರಿಗಳಿಂದ ಬಂಧಿತನಾದ್ದ ಬಂಟ್ವಾಳ ತಾಲೂಕಿನ ನಂದಾವರ ನಿವಾಸಿ ಪುತ್ತುಮೋನು ಎಂಬಾತನಿಗೆ ನ್ಯಾಯಾಲಯ ಜಾಮೀನು ನೀಡಿದೆ.
ಉದನೆ ಸಮೀಪದ ಕಡೆಂಬಿಲ ರಕ್ಷಿತಾರಣ್ಯದೊಳಗೆ ಶಿಕಾರಿ ನಡೆಸುತ್ತಿದ್ದ ಐವರು ಆರೋಪಿಗಳನ್ನು ಉಪ್ಪಿನಂಗಡಿ ವಲಯ ಅರಣ್ಯ ಅಧಿಕಾರಿಗಳು ಪತ್ತೆ ಹಚ್ಚಿ ಈ ಪೈಕಿ ಓರ್ವ ಆರೋಪಿ ಪುತ್ತುಮೋನು ಎಂಬಾತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.
ಕಾರ್ಯಾಚರಣೆ ವೇಳೆಯಲ್ಲಿ ಇತರ ಮೂವರು ಆರೋಪಿಗಳಾದ ಯೂಸುಫ್ ನಂದಾವರ, ರಝಾಕ್ ಉಪ್ಪಿನಂಗಡಿ, ಶಬೀರ್ ಮತ್ತು ಯಹ್ಯಾ ಸರಳಿಕಟ್ಟೆ ಎಂಬವರು ಕಾಡಿನಲ್ಲಿ ತಪ್ಪಿಸಿ ಪರಾರಿಯಾಗಿದ್ದರು.
ಬಂಧಿತ ಆರೋಪಿ ಪುತ್ತುಮೋನುವನ್ನು ಜಾಮೀನು ಮೇಲೆ ನ್ಯಾಯಾಲಯ ಬಿಡುಗಡೆಗೊಳಿಸಿದೆ. ಆರೋಪಿಯ ಪರವಾಗಿ ನ್ಯಾಯವಾದಿ ನಝೀರ್ ಬೆದ್ರೋಡಿ ವಾದಿಸಿದ್ದರು.