×
Ad

ಕೊಹ್ಲಿ ಗಾಯಕ್ಕೆ ಉಪ್ಪು ಸವರಿದ ಗಂಭೀರ್

Update: 2016-05-30 19:37 IST

ಮುಂಬೈ, ಮೇ 30: ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕ ಗೌತಮ್ ಗಂಭೀರ್ ಹಾಗು ಭಾರತದ ಸದ್ಯದ ಅತ್ಯಂತ ಬೇಡಿಕೆಯ ಕ್ರಿಕೆಟಿಗ ವಿರಾಟ್ ಕೊಹ್ಲಿ ನಡುವೆ 2013 ರ ಐಪಿಎಲ್ ನಲ್ಲಿ ನಡೆದ ಜಗಳದ ಬಳಿಕದ ಮುಸುಕಿನ ಗುದ್ದಾಟ ಇನ್ನೂ ಕೊನೆಗೊಂಡಿಲ್ಲವೇ ? 

ರವಿವಾರ ಐಪಿಎಲ್ ಫೈನಲ್ ನಲ್ಲಿ ಬೆಂಗಳೂರು ತಂಡ ಸೋತ ಬಳಿಕ  ಗಂಭೀರ್ ಮಾಡಿದ ಟ್ವೀಟ್ ಇದಕ್ಕೆ ' ಇಲ್ಲವೆಂಬ ' ಉತ್ತರ ನೀಡುತ್ತದೆ. 

ವಿಜೇತ ಸನ್ ರೈಸರ್ಸ್ ಹೈದರಾಬಾದ್ ತಂಡ ಹಾಗು ನಾಯಕ ಡೇವಿಡ್ ವಾರ್ನರ್ ಗೆ ಶುಭಾಷಯ ಕೋರಿದ ಗಂಭೀರ್ , ಅದೇ ಸಂದೇಶದಲ್ಲಿ ಕೊಹ್ಲಿ ತಂಡಕ್ಕೆ ಪರೋಕ್ಷವಾಗಿ ಕುಟುಕಿದ್ದಾರೆ. " Nice guys DO finish first " ( ಒಳ್ಳೆಯ ಹುಡುಗರು ಯಾವತ್ತೂ ಗೆಲ್ಲುತ್ತಾರೆ ) ಎಂಬ ವಾಕ್ಯದಲ್ಲಿ ತಮ್ಮ ಟ್ವೀಟ್ ನಲ್ಲಿ ಬಳಸಿರುವ ಗಂಭೀರ್ ಪರೋಕ್ಷವಾಗಿ ವಿರಾಟ್ ಹಾಗು ಅವರ ತಂಡವನ್ನು  " ಒಳ್ಳೆಯ ಹುಡುಗರಲ್ಲ " ಎಂದು ಹೇಳಿದ ಹಾಗೆ ಆಗಿದೆ.  

ಟ್ವಿಟ್ಟರ್ ಇದನ್ನು ಕೂಡಲೇ ಗುರುತಿಸಿದೆ ಹಾಗು ವಿರಾಟ್ ಅಭಿಮಾನಿಗಳು ಗಂಭೀರ್ ಮೇಲೆ ಮುಗಿಬಿದ್ದಿದ್ದಾರೆ. ಮುಂದೆ ಏನಾಗುತ್ತದೆ ನೋಡಬೇಕು . ಟ್ವೀಟ್ ಗಳನ್ನು ಇಲ್ಲಿ ನೋಡಿ: 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News