ಬೆಳ್ತಂಗಡಿ: ತಲೆಮರೆಸಿಕೊಂಡಿದ್ದ ಆರೋಪಿಯ ಸೆರೆ
Update: 2016-05-30 20:34 IST
ಬೆಳ್ತಂಗಡಿ, ಮೇ 30: ಮೂರು ವರ್ಷಗಳ ಹಿಂದೆ ಅಪರಾಧ ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ಆರೋಪಿಯೋರ್ವನನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿದ್ದಾರೆ.
ಕಾಜೂರು ನೆಲ್ಲಿಗುಡ್ಡೆ ನಿವಾಸಿ ಹಂಝ ಬಂಧಿತ ಆರೋಪಿ.
2013ರಲ್ಲಿ ಕಾಜೂರು ಬಳಿ ಗಲಾಟೆ, ಹಲ್ಲೆ ಹಾಗೂ ತಲವಾರಿನಿಂದ ಕಡಿದು ಕೊಲೆಯತ್ನ ನಡೆಸಿದ ಘಟನೆಯಲ್ಲಿ ಈತ ಪ್ರಮುಖ ಆರೋಪಿಯಾಗಿದ್ದ. ಘಟನೆಯ ಬಳಿಕ ಇತರೆ ಆರೋಪಿಗಳನ್ನು ಬಂಧಿಸಲಾಗಿತ್ತು. ಆದರೆ ಹಂಝ ಮಾತ್ರ ತಲೆ ಮರೆಸಿಕೊಂಡಿದ್ದ ಎನ್ನಲಾಗಿದೆ. ಈತನ ಬಗ್ಗೆ ಮಾಹಿತಿ ಪಡೆದು ಪೊಲೀಸರು ಸೋಮವಾರ ಆರೋಪಿಯನ್ನು ಬಂಧಿಸಿದ್ದಾರೆ.