×
Ad

ಎ.ಆರ್. ರಹಮಾನ್‌ಗೆ ಫುಕುವೊಕ ಪ್ರಶಸ್ತಿ

Update: 2016-05-30 20:53 IST

ಟೋಕಿಯೊ, ಮೇ 30: ಆಸ್ಕರ್ ವಿಜೇತ ಭಾರತೀಯ ಸಂಗೀತ ನಿರ್ದೇಶಕ ಎ.ಆರ್. ರಹಮಾನ್‌ರಿಗೆ ಸೋಮವಾರ ಜಪಾನ್‌ನ ಪ್ರತಿಷ್ಠಿತ 2016ರ ಸಾಲಿನ ಫುಕುವೊಕ ಪ್ರಶಸ್ತಿಯನ್ನು ಘೋಷಿಸಲಾಗಿದೆ.
ದಕ್ಷಿಣ ಏಶ್ಯದ ಸಾಂಪ್ರದಾಯಿಕ ಫ್ಯೂಶನ್ ಸಂಗೀತವನ್ನು ರಚಿಸಿ, ಸಂಗ್ರಹಿಸಿ ಹಾಗೂ ಪ್ರದರ್ಶಿಸುವಲ್ಲಿ ನೀಡಿದ ಮಹತ್ವದ ದೇಣಿಗೆಗಾಗಿ ಅವರಿಗೆ ಪ್ರಶಸ್ತಿಯನ್ನು ನೀಡಲಾಗಿದೆ.
ಏಶ್ಯದ ಸಂಸ್ಕೃತಿಯನ್ನು ಉಳಿಸುವಲ್ಲಿ ಮಹತ್ವದ ದೇಣಿಗೆಯನ್ನು ನೀಡುವ ವ್ಯಕ್ತಿಗಳು ಅಥವಾ ಸಂಘಟನೆಗಳನ್ನು ಗೌರವಿಸಲು ಫುಕುವೊಕ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಫುಕುವೊಕ ನಗರ ಮತ್ತು ಯೊಕಟೊಪಿಯ ಫೌಂಡೇಶನ್ ಜಂಟಿಯಾಗಿ ಪ್ರಶಸ್ತಿಯನ್ನು ಸ್ಥಾಪಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News