ಪಿಎಫ್‌ಐ ಫರಂಗಿಪೇಟೆ ವತಿಯಿಂದ ಉಚಿತ ಪುಸ್ತಕ ವಿತರಣೆ
Update: 2016-05-30 21:34 IST
ಮಂಗಳೂರು, ಮೇ 30: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಫರಂಗಿಪೇಟೆ ವತಿಯಿಂದ ಅರ್ಹ ಬಡ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಿಸಲಾಯಿತು.
ಸಭಾ ಕಾರ್ಯಕ್ರಮವನ್ನು ಅಮೆಮಾರ್ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸುಲೈಮಾನ್ ಉಸ್ತಾದ್ ದುಆ ನೆರವೇರಿಸುವ ಮೂಲಕ ಉದ್ಘಾಟಿಸಿದರು.
ಈ ಸಂದರ್ಭ ಮಾತನಾಡಿದ ಪಿಎಫ್‌ಐನ ಬಿ.ಸಿ.ರೋಡ್ ವಲಯ ಸದಸ್ಯ ಅಶ್ರಫ್ ಮಾಚಾರ್, ಆರ್ಥಿಕವಾಗಿ ಹಿಂದುಳಿದು ವಿದ್ಯಾಭ್ಯಾಸವನ್ನು ಅರ್ಧದಲ್ಲಿ ಮೊಟಕುಗೊಳಿಸುತ್ತಿರುವ ಸಮುದಾಯದ ದಯನೀಯ ಸ್ಥಿತಿಯನ್ನು ವಿವರಿಸಿ ಸಮಾಜದಲ್ಲಿ ಶಿಕ್ಷಣದ ಅಗತ್ಯತೆಯ ಬಗ್ಗೆ ವಿವರಿಸಿದರು.
ಪುತ್ತುಬಾವು ಅಧ್ಯಕ್ಷತೆ ವಹಿಸಿದ್ದರು. ಅಬ್ಬಾಸ್ ಪೇರಿಮಾರ್, ಶರೀಫ್ ಕುಂಪನಮಜಲು ಉಪಸ್ಥಿತರಿದ್ದರು. ಖಾದರ್ ಅಮೆಮಾರ್ ನಿರೂಪಿಸಿ, ವಂದಿಸಿದರು.