ಘನ ಡೀಸೆಲ್ ವಾಹನ ನಿಷೇಧ
ಹೊಸದಿಲ್ಲಿ, ಮೇ 30: ದಿಲ್ಲಿಯಲ್ಲಿ ಡೀಸೆಲ್ ಚಾಲಿತ ಹೊಸ ಘನ ವಾಹನಗಳ ನೋಂದಣಿಯ ಮೇಲಿನ ನಿಷೇಧವನ್ನು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಲಘುವಾಗಿಸಿದ್ದಾರೆ. ಇದೊಂದು ‘ಅಸ್ಥಿರ ಹಂತ’ವಾಗಿದ್ದು, ವಾಹನ ಕಂಪೆನಿಗಳ ಮೇಲೆ ಅದರಿಂದ ಪ್ರತಿಕೂಲ ಪರಿಣಾಮ ವಾಗದಷ್ಟು ದೊಡ್ಡ ಭಾರತದಲ್ಲಿದೆಯೆಂದು ಅವರು ಹೇಳಿದ್ದಾರೆ.
ಆರು ದಿನಗಳ ಪ್ರವಾಸಕ್ಕಾಗಿ ಜಪಾನ್‌ಗೆ ರವಿವಾರ ಹೋಗಿರುವ ಜೇಟ್ಲಿ, ಅಲ್ಲಿನ ಬಂಡವಾಳಗಾರರ ಮನವೊಲಿಸಲಿದ್ದಾರೆ ಹಾಗೂ ಸುಝುಕಿ ಮೋಟಾರ್‌ನ ಅಧ್ಯಕ್ಷ ಒಸಾಮು ಸುಝಕಿಯದವರನ್ನು ಮಂಗಳವಾರ ಭೇಟಿಯಾಗಲಿದ್ದಾರೆ.
ಭಾರತದ ವಾಹನ ವಲಯವು ಅತ್ಯಂತ ಆರಾಮ ಸ್ಥಿತಿಯಲ್ಲಿದೆ. ಏನಾಗುತ್ತರೋ ಅದೆಲ್ಲ ತಾತ್ಕಾಲಿಕ ಹಂತವಾಗಿದೆಯೆಂಬುದು ತನ್ನ ಭಾವನೆಯಾಗಿದೆ. ಸುಝುಕಿಗೆ ಇರುವ ವಿಶಾಲವಾದ ಮಾರುಕಟ್ಟೆಯನ್ನು ನೋಡಿದರೆ, ಅದು ಯಾವುದೇ ರೀತಿಯಲ್ಲಿ ಪ್ರತಿಕೂಲ ಪರಿಣಾಮ ಉಂಟುಮಾಡುವ ಸಾಧ್ಯತೆಯಿಲ್ಲವೆಂಬುದು ತನ್ನ ಅಭಿಪ್ರಾಯವಾಗಿದೆ ಎಂದು ಜೇಟ್ಲಿ ಅಭಿಪ್ರಾಯಿಸಿದ್ದಾರೆ.
ಮಾಲಿನ್ಯ ನಿಯಂತ್ರಣಕ್ಕಾಗಿ ದಿಲ್ಲಿಯ ರಾಜಧಾನಿ ವಲಯ ಹಾಗೂ ಕೇರಳಗಳಲ್ಲಿ 2 ಸಾವಿರ ಸಿಸಿಗಿಂತ ಹೆಚ್ಚು ಡೀಸೆಲ್ ವಾಹನಗಳ ನಿಷೇಧದಿಂದ ಭಾರತದಲ್ಲುಂಟಾಗಿರುವ ನೀತಿ ಅನಿಶ್ಚಿತತೆಯ ನಡುವೆ ಸುಝುಕಿಯವರೊಂದಿಗಿನ ಅವರ ಭೇಟಿಯ ಬಗ್ಗೆ ಪ್ರಶ್ನಿಸಲಾಗಿತ್ತು.
2ಲೀ. ಅಥವಾ ಹೆಚ್ಚಿನ ಇಂಜಿನ್ ಇರುವ ದೊಡ್ಡ ಡೀಸೆಲ್ ಕಾರುಗಳು ಹಾಗೂ ಎಸ್‌ಯುವಿಗಳ ಮೇಲೆ ಮೊದಲು ಡಿಸೆಂಬರ್‌ನಲ್ಲಿ ನಿಷೇಧ ವಿಧಿಸಲಾಗಿತ್ತು ಬಳಿಕ ಇತ್ತೀಚೆಗೆ ಅದನ್ನು ಕೇರಳಕ್ಕೆ ವಿಸ್ತರಿಸಲಾಗಿತ್ತು. ಆದರೆ, ಅದಕ್ಕೆ ರಾಜ್ಯದ ಹೈಕೋರ್ಟ್ ತಾತ್ಕಾಲಿಕ ತಡೆಯಾಜ್ಞೆ ನೀಡಿದೆ.