ನಿಧನ
Update: 2016-05-30 23:52 IST
ಆನಂದ ಪೂಜಾರಿ
ಮಂಗಳೂರು, ಮೇ 30: ಪಂಜಿಮೊಗರಿನ ಆನಂದ ಪೂಜಾರಿ(75) ಸೋಮವಾರ ಅಪರಾಹ್ನ ನಿಧನರಾದರು.
ಮೃತರು ಪತ್ನಿ ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.
ಮಾರ್ನಾಡು ರಾಮಚಂದ್ರ ಆಸ್ರಣ್ಣ
ಮೂಡುಬಿದಿರೆ, ಮೇ 30: ಮೂಡುಮಾರ್ನಾಡು ಹೊಯ್ಪಲಬೆಟ್ಟ ದೈವಸ್ಥಾನ ಸೇರಿದಂತೆ ಆಸುಪಾಸಿನ ಹಲವು ಕ್ಷೇತ್ರಗಳಲ್ಲಿ ಆಸ್ರಣ್ಣರಾಗಿ ಸೇವೆ ಸಲ್ಲಿಸುತ್ತಿದ್ದ ಮಾರ್ನಾಡು ರಾಮಚಂದ್ರ ಆಸ್ರಣ್ಣ(81) ರವಿವಾರ ನಿಧನ ಹೊಂದಿದರು. ಮೃತರು ಪತ್ನಿ, ಪುತ್ರ ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ. ವೈದಿಕರಾಗಿ, ಕೃಷಿಕರಾಗಿ ಜನಾನುರಾಗಿಯಾಗಿದ್ದ ಅವರು ಹೊಯ್ಪಾಲಬೆಟ್ಟದಲ್ಲಿ 45 ವರ್ಷ, ಬೆಳುವಾಯಿ ಹೋಮಲ್ಕೆ ಗರಡಿಯಲ್ಲಿ 36 ವರ್ಷ ಸೇವೆ ಸಲ್ಲಿಸಿದ್ದು ಶ್ರೀಕ್ಷೇತ್ರ ಬನ್ನಡ್ಕ, ಕೋಟೆಬಾಗಿಲು ಮಾರಿಗುಡಿ, ಕಾರ್ಕಳ ಉಚ್ಛಂಗಿ ಮಾರಿಗುಡಿ, ಗಂಟಾಲ್ಕಟ್ಟೆ ಮತ್ತಿತರ ಕಡೆಗಳಲ್ಲಿ ಪ್ರಧಾನ ಅರ್ಚಕರಾಗಿಯೂ ಸೇವೆ ಸಲ್ಲಿಸಿದ್ದರು.