ಕಾಸರಗೋಡಿನಲ್ಲಿ ಡೆಂಗ್ ಹಾವಳಿ
ಕಾಸರಗೋಡು, ಮೇ 30: ಮಳೆಗಾಲ ಆರಂಭ ವಾಗುತ್ತಿದ್ದಂತೆ ಜಿಲ್ಲೆಯಲ್ಲಿ ಡೆಂಗ್ ಹಾವಳಿ ಕಂಡುಬರುತ್ತಿದ್ದು, ಮುನ್ನೆಚ್ಚರಿಕೆ ವಹಿ ಸುವಂತೆ ಆರೋಗ್ಯ ಇಲಾಖೆ ಸೂಚಿಸಿದೆ.
ಜಿಲ್ಲೆಯಲ್ಲಿ ಈಗಾಗಲೇ 32 ಮಂದಿ ಯಲ್ಲಿ ಡೆಂಗ್ ಪತ್ತೆಯಾಗಿದೆ. ಕಳೆದ ವರ್ಷದ ಈ ಅವಧಿಯಲ್ಲಿ 14 ಮಂದಿಯಲ್ಲಿ ಮಾತ್ರ ಡೆಂಗ್ ಪತ್ತೆಯಾಗಿತ್ತು. ಆದರೆ ಈ ಬಾರಿ 32 ಮಂದಿಯಲ್ಲಿ ರೋಗ ಪತ್ತೆಯಾಗಿದೆ. 209 ಮಂದಿಯಲ್ಲಿ ಡೆಂಗ್ ಜ್ವರದ ಲಕ್ಷಣ ಕಂಡುಬಂದಿದೆ. 2013ರಲ್ಲೂ ಡೆಂಗ್ ಭೀತಿ ಸೃಷ್ಟಿಸಿತ್ತು. ಅದೇ ರೀತಿ ಈ ವರ್ಷವೂ ಡೆಂಗ್ ಹರಡುವ ಸಾಧ್ಯತೆ ಇದೆ ಎಂದು ಆರೋಗ್ಯ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.
ಎನ್ಮಕಜೆ, ಮುಳಿಯಾರು, ಪೆರಿಯ, ಪನತ್ತಡಿ, ಕಳ್ಳಾರ್ ಮೊದಲಾದೆಡೆಗಳಲ್ಲಿ ಡೆಂಗ್ ತೀವ್ರಗೊಂಡಿದೆ. ಕಳೆದ ವರ್ಷಕ್ಕಿಂತ ಗಂಭೀರ ಸ್ಥಿತಿಯಲ್ಲಿ ಡೆಂಗ್‌ಹಾವಳಿ ಕಂಡುಬರುತ್ತಿದೆ. ಡೆಂಗ್ ಹಾವಳಿ ಎದುರಿಸಲು ಆರೋಗ್ಯ ಇಲಾಖೆ ಸಜ್ಜಾಗಿದ್ದು, ಜೂ.1ರಿಂದ 5ರ ತನಕ ಸ್ವಚ್ಛತಾ ಆಂದೋಲನ ನಡೆಸಲು ಸರಕಾರ ತೀರ್ಮಾನಿಸಿದೆ. ಜನರ ಸಹಕಾರದೊಂದಿಗೆ ಎಲ್ಲ ರೀತಿಯ ಮುಂಜಾಗ್ರತಾ ಕ್ರಮ ಗಳನ್ನು ತೆಗೆದುಕೊಳ್ಳಲು ಆರೋಗ್ಯ ಇಲಾಖೆ ಮುಂದಾಗಿದೆ.