ಲಂಕಾ ನೌಕಾಪಡೆಯಿಂದ 7 ಭಾರತೀಯ ಮೀನುಗಾರರ ಬಂಧನ

Update: 2016-05-31 14:41 GMT

ಕೊಲಂಬೊ, ಮೇ 31: ಶ್ರೀಲಂಕಾದ ಜಲಪ್ರದೇಶದಲ್ಲಿ ಮೀನುಗಾರಿಕೆ ನಡೆಸಿದ ಆರೋಪದಲ್ಲಿ ಆ ದೇಶದ ನೌಕಾಪಡೆಯು ಏಳು ಭಾರತೀಯ ಮೀನುಗಾರರನ್ನು ಸೋಮವಾರ ಬಂಧಿಸಿದೆ ಹಾಗೂ ಅವರ ದೋಣಿಯನ್ನು ವಶಪಡಿಸಿಕೊಂಡಿದೆ ಎಂದು ನೌಕಾಪಡೆ ಕೊಲಂಬೊದಲ್ಲಿ ಮಂಗಳವಾರ ತಿಳಿಸಿದೆ.

ಉತ್ತರ ಶ್ರೀಲಂಕಾದ ತಲೈಮನ್ನಾರ್‌ನಲ್ಲಿ ಬಂಧಿಸಲ್ಪಟ್ಟ ಮೀನುಗಾರರನ್ನು ಮುಂದಿನ ಕ್ರಮಕ್ಕಾಗಿ ಮನ್ನಾರ್ ಮೀನುಗಾರಿಕಾ ನಿರೀಕ್ಷಕರಿಗೆ ಹಸ್ತಾಂತರಿಸಲಾಗಿದೆ.

ಯಾಂತ್ರೀಕೃತ ದೋಣಿಗಳನ್ನು ಬಳಸಿ ಮೀನು ಹಿಡಿಯುವುದರ ಮೇಲೆ ವಿಧಿಸಲಾಗಿರುವ 45 ದಿನಗಳ ನಿಷೇಧದ ಬಳಿಕ ಸಮುದ್ರಕ್ಕಿಳಿದ ಮೊದಲ ದಿನವೇ ಭಾರತೀಯ ಮೀನುಗಾರರನ್ನು ಬಂಧಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News