ಮೆಡಿಟರೇನಿಯನ್ ಸಮುದ್ರದಲ್ಲಿ ಮುಳುಗಿದ ಇನ್ನೊಂದು ಮಗು ಐರೋಪ್ಯ ನಾಯಕರ ಮನ ಕರಗುವುದೇ?

Update: 2016-05-31 15:24 GMT

ಬರ್ಲಿನ್ (ಜರ್ಮನಿ), ಮೇ 31: ವಲಸಿಗರಿಗೆ ಸುರಕ್ಷಿತ ದಾರಿಯನ್ನು ಒದಗಿಸಿಕೊಡುವ ನಿಟ್ಟಿನಲ್ಲಿ ಐರೋಪ್ಯ ನಾಯಕರ ಮನವೊಲಿಸುವ ಉದ್ದೇಶದಿಂದ, ಮೆಡಿಟರೇನಿಯನ್ ಸಮುದ್ರದಿಂದ ಹೊರದೆಗೆದ ಮೃತ ವಲಸಿಗ ಮಗುವೊಂದರ ಚಿತ್ರವನ್ನು ಮಾನವಹಕ್ಕುಗಳ ಸಂಘಟನೆಯೊಂದು ಪ್ರಕಟಿಸಿದೆ.

ಸಿರಿಯದಿಂದ ಯುರೋಪ್‌ಗೆ ವಲಸೆ ಹೋಗಲು ಪ್ರಯತ್ನಿಸುತ್ತಿದ್ದ ನೂರಾರು ನಿರಾಶ್ರಿತರು ಕಳೆದ ವಾರ ಮೆಡಿಟರೇನಿಯನ್ ಸಮುದ್ರದಲ್ಲಿ ಮುಳುಗಿ ಮೃತಪಟ್ಟಿರುವುದನ್ನು ಸ್ಮರಿಸಬಹುದಾಗಿದೆ.

ಜರ್ಮನಿಯ ಸರಕಾರೇತರ ಸಂಸ್ಥೆ ‘ಸೀ-ವಾಚ್’ ಮಗುವಿನ ಗುರುತನ್ನು ಬಹಿರಂಗಪಡಿಸಿಲ್ಲ. ಆದರೆ, ಕಳೆದ ವಾರ 350 ವಲಸಿಗರನ್ನು ಹೊತ್ತೊಯ್ಯುತ್ತಿದ್ದ ಮರದ ದೋಣಿಯೊಂದು ಲಿಬಿಯ ಕರಾವಳಿಯಲ್ಲಿ ಮಗುಚಿದ ಬಳಿಕ ಈ ಮಗುವಿನ ಮೃತದೇಹ ಪತ್ತೆಯಾಗಿದೆ ಎಂದು ಅದು ತಿಳಿಸಿದೆ.

ರಕ್ಷಣಾ ದೋಣಿ ಆಗಮಿಸುವ ಮುನ್ನವೇ ನತದೃಷ್ಟ ದೋಣಿಯಲ್ಲಿದ್ದ ಹೆಚ್ಚಿನವರು ಮೃತಪಟ್ಟಿದ್ದರು ಎಂದು ಅದು ಹೇಳಿದೆ.

ಇನ್ನಷ್ಟು ವಲಸಿಗರ ಸಾವುಗಳನ್ನು ತಪ್ಪಿಸುವುದಕ್ಕಾಗಿ ಐರೋಪ್ಯ ಒಕ್ಕೂಟದ ನಾಯಕರು ತುರ್ತು ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ ಎಂದು ಸೀ ವಾಚ್ ಹೇಳಿದೆ.

ಎರಡನೆ ಮಹಾಯುದ್ಧದ ಬಳಿಕ ಯುರೋಪ್ ಬೃಹತ್ ವಲಸಿಗ ಸಮಸ್ಯೆಯನ್ನು ಎದುರಿಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News